ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಳ್ಳಿಗಳ ಉದ್ಧಾರಕ್ಕೆ ಶ್ರಮಿಸಲು ಕರೆ

Rashmi Kasaragodu
Updated On : 4 Feb 2014, 1:22 am

ಹಾಸನ: ರಾಷ್ಟ್ರೀಯ ಸೇವಾ ಯೋಜನಾ ಶಿಬಿರಾರ್ಥಿಗಳು ಗ್ರಾಮೀಣ ಬದುಕನ್ನು ಅಳವಡಿಸಿಕೊಂಡು, ಹಳ್ಳಿಗಳ ಉದ್ಧಾರಕ್ಕೆ ಶ್ರಮಿಸಬೇಕೆಂದು ಶಾಸಕ ಎಚ್.ಎಸ್.ಪ್ರಕಾಶ್ ಕರೆ ನೀಡಿದರು.
ತಾಲೂಕಿನ ಕಂಚಮಾರನಹಳ್ಳಿ ಗ್ರಾಮದಲ್ಲಿ ನಗರದ ಸರ್ಕಾರಿ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನವಿ: ಅಂತಾರಾಷ್ಟ್ರಿಯ ಪ್ರಶಸ್ತಿ ವಿಜೇತ ಕಲಾವಿದ ಗ್ಯಾರಂಟಿ ರಾಮಣ್ಣ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಸಾಮಾಜಿಕವಾಗಿ, ಸಾಂಸ್ಕತಿಕವಾಗಿ, ರಾಜಕೀಯವಾಗಿ ಹಳ್ಳಿಗಳು ಛಿದ್ರಛಿದ್ರವಾಗಿರುವ ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ನಮ್ಮ ಊರಿನಲ್ಲಿ ಏರ್ಪಡಿಸಿರುವುದು ನಮ್ಮೆಲ್ಲರ ಪುಣ್ಯ ವೆಂದು ತಿಳಿಸಿ, ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.  
ಪ್ರಾಧ್ಯಾಪಕ ವೈ.ಪಿ. ಮಲ್ಲೇಗೌಡ, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿ ರಮೇಶ್, ಸಹ ಶಿಬಿರಾಧಿಕಾರಿ ಪದ್ಮಾವತಿ, ತೇಜೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಂಗಮ್ಮ, ಕಂಚಮಾರನಹಳ್ಳಿ  ಗ್ರಾಮ ಪಂಚಾಯ್ತಿ ಸದಸ್ಯ  ಗೋಪಾಲಕೃಷ್ಣ, ಗ್ರಾಮದ ಮುಖಂಡರು ಇದ್ದರು. ಸಹ ಶಿಬಿರಾಧಿಕಾರಿ ಸಿ.ಆರ್. ನಿಂಗರಾಜು ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಬಿ.ಆರ್. ರಮೇಶ್ ವಂದಿಸಿದರು. ಶಿಬಿರಾರ್ಥಿ ಶೀಲಾ ಪ್ರಾರ್ಥಿಸಿದರು. ಮುರುಳೀಧರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement