ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಒತ್ತುವರಿ ಭೂಮಿ ಭೂರಹಿತರಿಗೆ ನೀಡಿ

Vishwanath S
Updated On : 5 Feb 2014, 12:16 pm

ಕ.ಪ್ರ. ವಾರ್ತೆ ,  ಸಕಲೇಶಪುರ ,  ಫೆ 4
ತಾಲೂಕಿನ ರಾಜೇಂದ್ರಪುರ ಗ್ರಾಮದ ಸರ್ವೆ ನಂ .20ರ ಒತ್ತುವರಿ ಭೂಮಿಯನ್ನು ತೆರವುಗೊಳಿಸಿ ಭೂರಹಿತರಿಗೆ ನೀಡುವಂತೆ ಒತ್ತಾಯಿಸಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಮಂಗಳವಾರ ಉಪವಿಭಾಗಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ತಾಲ್ಲೂಕು, ಬೆಳಗೋಡು ಹೋಬಳಿ, ಬಾಳ್ಳುಪೇಟೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 12 ಸಾವಿರ ಜನಸಂಖ್ಯೆ ಇದ್ದು, ಸದರಿ ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ, ಮುಸ್ಲಿಂ, ಕ್ರಿಶ್ಚಿಯನ್ ಹಿಂದುಳಿದ ವರ್ಗಗಳಿಗೆ ಸೇರಿದ ಜನರು ವಾಸವಾಗಿರುತ್ತಾರೆ. ಈ ಬಾಳ್ಳುಪೇಟೆ ಪಂಚಾಯ್ತಿಯು ಹೊಂದಿರುವ ಜನಸಂಖ್ಯೆಗೆ ಅನುಗುಣವಾಗಿ ಶಾಲಾ-ಕಾಲೇಜು, ಸ್ಮಶಾನ, ಆಸ್ಪತ್ರೆ, ನಿವೇಶನಗಳು ಅವಶ್ಯಕವಾಗಿರುತ್ತವೆ.  ಆದರೆ ಬಾಳ್ಳುಪೇಟೆ ಪಂಚಾಯಿತಿಯ ಆಜೂಬಾಜುಗಳಲ್ಲಿ ಯಾವುದೇ ಸರ್ಕಾರಿ ಜಮೀನು ಇರುವುದಿಲ್ಲ ಎಂದು ಗ್ರಾಮಸ್ಥರು ಹೇಳಿದರು.
ಅತಿಕ್ರಮಣ: ಗ್ರಾಮದ ಸರ್ವೇ ನಂ. 20ರಲ್ಲಿ ಶ್ರೀಧರ ಕಲಿವೀರ್ ಎಂಬುವವರು ಆರ್ಥಿಕವಾಗಿ ಮುಂದುವರಿದಿದ್ದು, ಯಾವುದೇ ದಾಖಲಾತಿಗಳು ಈ ಜಮೀನಿಗೆ ಸಂಬಂಧಪಟ್ಟಂತೆ ನಮಗೆ ತಿಳಿದ ಮಟ್ಟಿಗೆ ಯಾವುದೇ ದಾಖಲೆ ಇರುವುದಿಲ್ಲ. ಆದರೆ ಜಮೀನಿನಲ್ಲಿ 105.8 ಎಕರೆ ಜಮೀನು ನನಗೆ ಮಂಜೂರಾಗಿದೆ ಎಂದು ಈ ಮೇಲ್ಕಂಡ ಗ್ರಾಮದ ಎಲ್ಲಾ ವರ್ಗದ ಬಡ, ಕೂಲಿ ಕಾರ್ಮಿಕರಿಗೆ ಸುಳ್ಳು ಹೇಳಿಕೊಂಡು ಹೆದರಿಸಿಕೊಂಡು ಬೆದರಿಸಿಕೊಂಡು ಉದ್ದೇಶಪೂರ್ವಕವಾಗಿ ಈ ಜಮೀನನ್ನು ಅತಿಕ್ರಮಣ ಮಾಡಲು ಪ್ರಯತ್ನಿಸುತ್ತಿದ್ದಾನೆ.
ಆಕ್ರೋಶ: ಗ್ರಾಮದಲ್ಲಿ ವಾಸವಿಲ್ಲದೇ ಇರುವ ಶಿವರಾಮಯ್ಯ ಬಿನ್ ರಾಮಯ್ಯ ಎಂಬುವ ವ್ಯಕ್ತಿ ತನ್ನ ಹಣಬಲ, ಅಧಿಕಾರಗಳ ಸಹಾಯದಿಂದ ನನಗೆ ಸುಮಾರು 85.20 ಎಕರೆ ಜಮೀನನ್ನು ಮಂಜೂರು ಆಗಿದೆ ಎಂದು ಹೇಳಿಕೊಂಡು ರಾಜಶೇಖರ್ ಅವರಿಗೆ 1.10 ಎಕರೆ, ವಿಕಾಸ್ ಎಸ್ಟೇಟ್‌ಗೆ 5 ಎಕರೆ, ಎಚ್.ಬಿ. ಜಯಪ್ರಕಾಶ್ ಅವರಿಗೆ 25 ಎಕರೆ ಜಮೀನನ್ನು ಮಾರಾಟ ಮಾಡಿದ್ದಾನೆ ಹಾಗೂ ಸ್ವಂತ ಹೆಸರಿನಲ್ಲಿ 44 ಎಕರೆ ಉಳಿಸಿಕೊಂಡು ಈ ಜಮೀನನ್ನೂ ಸಹ ಬೇರೆಯವರಿಗೆ ಮಾರಾಟ ಮಾಡಿರುತ್ತಾರೆ.  ಈ ಬಗ್ಗೆ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದರೂ ಸಹ ಉಡಾಫೆಯಿಂದ ಜಮೀನು ಮಾರಾಟ ಮಾಡಿಕೊಂಡೇ ಬಂದಿರುತ್ತಾರೆಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್ ಅವರ ಗಮನಕ್ಕೆ ತಂದಿದ್ದು ಹಾಗೂ ಅರ್ಜಿಗಳನ್ನು ಸಲ್ಲಿಸಿದ್ದರೂ ಯಾವುದೇ ರೀತಿಯಾದ ಕ್ರಮ ಕೈಗೊಂಡಿರುವುದಿಲ್ಲ ಎಂದು ಅರೋಪಿಸಿದರು.
ಪ್ರತಿಭಟನೆಯ ನೇತೃತ್ವವನ್ನು ದರ್ಮಪ್ರಕಾಶ್, ದ್ಯಾವಪ್ಪ, ಚಂದ್ರು, ಪರಮೇಶ್, ಸಿದ್ದರಾಜು, ಮಾದಯ್ಯ ಮತ್ತು ಬಸವರಾಜು ಇನ್ನಿತರರು ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement