ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜೈವಿಕ ಗೊಬ್ಬರದಿಂದ ಹೆಚ್ಚಿನ ಶುಂಠಿ ಇಳುವರಿ

Vishwanath S
Updated On : 5 Feb 2014, 12:17 pm

ಹಾಸನ: ಶುಂಠಿ ಬೆಳೆಯು ಹೆಚ್ಚಿನ ಇಳುವರಿ ಹಾಗೂ ರೋಗಮುಕ್ತವಾಗಿ ಬರಬೇಕಾದರೆ ಮಣ್ಣಿಗೆ ಜೈವಿಕ, ಸಗಣಿ ಗೊಬ್ಬರವನ್ನು ಹೆಚ್ಚಾಗಿ ಬಳಸಬೇಕೇ ಹೊರತು ರಾಸಯನಿಕ ಗೊಬ್ಬರ ಬಳಸಬಾರದುಎಂದು ಕೃಷಿ ತಜ್ಞ ಡಾ. ವಿಜಯ್ ಅಂಗಡಿ ತಿಳಿಸಿದರು.
ತಾಲೂಕಿನ ಕಂಚಮಾನಹಳ್ಳಿಯಲ್ಲಿ ನಗರದ ಸರ್ಕಾರಿ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯು ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಶುಂಠಿ ಬೆಳೆಯಲ್ಲಿ ಸುಧಾರಿತ ಕ್ರಮಗಳು ಕುರಿತು ಉಪನ್ಯಾಸ ನೀಡಿದ ಅವರು, ರೋಗವನ್ನು ತಡೆಗಟ್ಟಬೇಕಾದರೆ ನಾಟಿ ಹಸುವಿನ ಗಂಜಲ ಹಾಗೂ ಲಘು ಪೋಷಕಾಂಶವುಳ್ಳ ಟಾನಿಕ್‌ಗಳನ್ನು ಸಂಪಡಿಸಬೇಕೆಂದು ತಿಳಿಸಿದರು. ನಂತರ ಗ್ರಾಮಸ್ಥರು ಕೇಳಿದ ಸಮಸ್ಯೆಗಳನ್ನು ಪರಿಹರಿಸಿದರು. ಕಂಚಮಾರನಹಳ್ಳಿಯ ಪ್ರಗತಿ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ರಾಮಚಂದ್ರ ಮಾತನಾಡಿ, ರೇಡಿಯೊದಲ್ಲಿ ಬಿತ್ತರವಾಗುತ್ತಿರುವ ಕೃಷಿ ಕಾರ್ಯಕ್ರಮಗಳು ರೈತರಿಗೆ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು. ಕಾಲೇಜಿನ ಗ್ರಂಥಪಾಲಕ ಪಾಲಾಕ್ಷ ಮಾತನಾಡಿ, ಇಂತಹ ಶಿಬಿರಗಳಿಂದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳಿಗೆ ಗ್ರಾಮೀಣ ಬದುಕಿನ ಅರಿವಾಗುತ್ತದೆ ಎಂದರು.  ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿಗಳಾದ ರಮೇಶ್, ಸಹ ಶಿಬಿರಾಧಿಕಾರಿ ಸಿ.ಆರ್.ನಿಂಗರಾಜು ಹಾಗೂ ಸಹ ಶಿಬಿರಾಧಿಕಾರಿ ಪದ್ಮಾವತಿ, ಗ್ರಾಮದ ಮುಖಂಡರು ಇದ್ದರು.  ಶಿಬಿರಾರ್ಥಿ ರಾಮಕುಮಾರ್ ಸ್ವಾಗತಿಸಿದರು. ಕೆ.ಸಿ. ನವೀನ  ವಂದಿಸಿದರು. ಶಿಬಿರಾರ್ಥಿ ಕೆ.ಬಿ. ಭಾನು ಪ್ರಾರ್ಥಿಸಿದರು. ಕೃಪಾ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement