ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಪರಿಹಾರ ನೀಡಿದರೆ ಮಾತ್ರ ಹೆಚ್ಚುವರಿ ಜಾಗ'

Vishwanath S
Updated On : 5 Feb 2014, 12:16 pm

ಕ.ಪ್ರ. ವಾರ್ತೆ ,  ಬೇಲೂರು ,  ಫೆ 4
ಪಟ್ಟಣದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸೂಕ್ತ ಪರಿಹಾರ ನೀಡಿದರೆ ಸರ್ಕಾರ ಹೆಚ್ಚುವರಿ ಜಾಗ ಬಿಡಲು ಸಿದ್ಧ ಎಂದು ಮುಖ್ಯ ರಸ್ತೆ ವರ್ತಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಉಮಾಶಂಕರ್ ಮತ್ತು ಉಪಾಧ್ಯಕ್ಷ ಬಿ.ಆರ್. ತೀರ್ಥಂಕರ ತಿಳಿಸಿದ್ದಾರೆ.
ಅವರು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆ ರಸ್ತೆ ಜಾಗ ಗುರುತು ಮಾಡಿದ್ದು, ಇನ್ನೂ ಹೆಚ್ಚುವರಿ ಜಾಗವನ್ನು ವರ್ತಕರಿಗೆ ಸಮರ್ಪಕ ಪರಿಹಾರ ನೀಡಿದರೆ ನಾವು ಜಾಗ ಕೊಡಲು ಸಿದ್ಧರಿದ್ದೇವೆ ಎಂದರು.  ಜಿಲ್ಲಾಧಿಕಾರಿಗಳು ಈ ಬಗ್ಗೆ ಪೂರ್ವಭಾವಿ ಸಭೆ ಕರೆಯುವ ಸಂದರ್ಭದಲ್ಲಿ ವರ್ತಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕರೆದು ಚರ್ಚಿಸಬೇಕೆಂದು ತಿಳಿಸಿದರು. ಈಗಾಗಲೇ, ರಾಷ್ಟ್ರೀಯ ಹೆದ್ದಾರಿ ಪಟ್ಟಣದಲ್ಲಿ ಹಾದು ಹೋದರೆ ಹಲವಾರು ವರ್ತಕರಿಗೆ ನಷ್ಟವಾಗಲಿದ್ದು ಹಾಗೂ ಕಟ್ಟಡಗಳು ನೆಲ ಸಮವಾಗುವುದರಿಂದ, ಬಡ ವರ್ತಕರಿಗೆ ತೀವ್ರ ತೊಂದರೆಯಾಗುವುದರಿಂದ ವರ್ತುಲ ರಸ್ತೆ ನಿರ್ಮಾಣಕ್ಕೆ ವರ್ತಕರು ಆಗ್ರಹಿಸಿದ್ದು, ಅದರಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಶಾಸಕ ವೈ.ಎನ್. ರುದ್ರೇಶಗೌಡ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಶಿಫಾರಸ್ಸು ಮಾಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರವಿಕುಮಾರ್, ರಮೇಶ್, ಶಿವಾಜಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement