ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಲ್ಮಿಡಿಯಲ್ಲಿ ಸುವರ್ಣ ಗ್ರಾಮ ಯೋಜನೆಗೆ ಚಾಲನೆ

Vishwanath S
Updated On : 5 Feb 2014, 12:16 pm

ಕ.ಪ್ರ. ವಾರ್ತೆ ,  ಬೇಲೂರು ,  ಫೆ 4
ಪ್ರಥಮ ಕನ್ನಡ ಶಿಲಾ ಶಾಸನ ದೊರೆತ ಹೆಗ್ಗಳಿಕೆಗೆ ಪಾತ್ರವಾಗಿರುವ ಹಲ್ಮಿಡಿ ಗ್ರಾಮವನ್ನು ರಾಜ್ಯದಲ್ಲೇ ಮಾದರಿ ಗ್ರಾಮವನ್ನಾಗಿಸಲು ಹಲವಾರು ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದೆ ಎಂದು ಶಾಸಕ ವೈ.ಎನ್. ರುದ್ರೇಶ್ ಗೌಡ ತಿಳಿಸಿದರು.
ಾಲೂಕಿನ ಹಲ್ಮಿಡಿ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆ ಹಾಗೂ ಕನ್ನಡ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿ ಹಲ್ಮಿಡಿ ಸುವರ್ಣ ಗ್ರಾಮಾಭಿವೃದ್ಧಿ ಯೋಜನೆಗೆ ರು. 68 ಲಕ್ಷ ವೆಚ್ಚದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ರು. 34 ಲಕ್ಷ ಸುವರ್ಣಗ್ರಾಮ ಯೋಜನೆಗೆ ವಿನಿಯೋಗಿಸಲಾಗುತ್ತಿದ್ದು ಉಳಿದ ಹಣವನ್ನು ಕನ್ನಡಭವನಕ್ಕೆ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಹಲ್ಮಿಡಿ ಗ್ರಾಮವನ್ನು ಮಾದಜರಿಗ್ರಾಮವನ್ನಾಗಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರು. 1 ಕೋಟಿ ಹಣವನ್ನು ಬಿಡುಗಡೆ ಮಾಡಲು ಒಪ್ಪಿದ್ದು, ಇದಕ್ಕೆ ಪ್ರವಾಸೋದ್ಯಮ ಇಲಾಖೆ ಅನುಮೋದನೆ ನೀಡಬೇಕಿದೆ. ಈ ಹಿಂದೆ ಪ್ರವಾಸೋದ್ಯಮ ಇಲಾಖೆ ರು. 40 ಲಕ್ಷವನ್ನು ಹಲ್ಮಿಡಿಗೆ ಬಿಡುಗಡೆ ಮಾಡಿತ್ತು. ಆದರೆ, ಹಲ್ಮಿಡಿ ಪ್ರವಾಸೋದ್ಯಮ ಕೇಂದ್ರವಾಗಿಲ್ಲ ಎಂಬ ಕಾರಣದಿಂದಾಗಿ ಹಣವನ್ನು ಹಾಗೇ ಇಟ್ಟಿದ್ದು ಕೂಡಲೇ ಬಿಡುಗಡೆ ಮಾಡುವಂತೆ ರುದ್ರೇಶ್ ಗೌಡ ಒತ್ತಾಯಿಸಿದರು.  ಟೀಕೆ: ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಜನಾರ್ಧನ್ ಮಾತನಾಡಿ, ಕನ್ನಡ ಭವನಕ್ಕೆ ನಿರ್ಮಾಣಕ್ಕೆ ಈ ಹಿಂದೆ ಅಧ್ಯಕ್ಷರಾಗಿದ್ದ ಮದನಗೌಡ ಅವಿರತವಾಗಿ ಪ್ರಯತ್ನಿಸಿದ್ದು ನಂತರ ತಮಗೆ ಮಾಹಿತಿಯನ್ನು ನೀಡುವುದರ ಮೂಲಕ ಕನಸು ಸಾಕಾರಗೊಂಡಿದೆ. ರು. 40 ಲಕ್ಷ ರು ವೆಚ್ಚದಲ್ಲಿ ಹಲ್ಮಿಡಿ ಶಾಸನ ದೊರೆತ ಜಾಗವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಿದ್ದರು.
ಆದರೆ, ವರ್ಷವಾದರೂ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಟೀಕಿಸಿದರು.
ಒತ್ತಾಯ: ಸರ್ಕಾರ ಮಕ್ಕಳಿಗೆ ಶೈಕ್ಷಣಿಕ ಪ್ರವಾಸವನ್ನು ಪ್ರತಿವರ್ಷ ಏರ್ಪಡಿಸುತ್ತಿದ್ದು ಮಕ್ಕಳ ಪ್ರವಾಸದ ಆರಂಭ ಹಲ್ಮಿಡಿ ಗ್ರಾಮದಿಂದಲೇ ಶುರುಮಾಡುವಂತಾಗಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.  
ತಾಲೂಕು ಕಸಾಪ ಅಧ್ಯಕ್ಷ ಆನಂದ್, ತಾಪಂ ಮಾಜಿ ಸದಸ್ಯ ಹರಿಯಪ್ಪ, ಗ್ರಾಮದ ಗುರುಸಿದ್ದೇಗೌಡರು, ಗ್ರಾಪಂ ಅಧ್ಯಕ್ಷ ನಾರಾಯಣ್, ಸದಸ್ಯ ಹೇಮಾವತಿ, ಮಮತ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement