ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಹಾಸಂಪ್ರೋಕ್ಷಣೆ ಪೂರ್ಣಾಹುತಿ

Vishwanath S
Updated On : 6 Feb 2014, 12:52 pm

ಜಾವಗಲ್: ಶ್ರೀಲಕ್ಷ್ಮೀ ನರಸಿಂಹ ದೇವಾಲಯ ವಿಮಾನ ಗೋಪುರ ಕಳಸ ಸ್ಥಾಪನೆಯು ಇತ್ತೀಚೆಗೆ ನಾನಾ ಹೋಮದಿಗಳೊಂದಿಗೆ ವಿಜೃಂಭಣೆಯಿಂದ ಇತ್ತೀಚೆಗೆ ನಡೆಯಿತು.
ಶ್ರೀಯವರ ಶಯ್ಯಧಿವಾಸ ಸರ್ವ ದೇವಾತ ಗಾಯಿತ್ರಿ ಹೋಮ ಪೂಜಾಕಾರ್ಯಗಳು ನಡೆಯಿತು ಸಖರಾಯಪಟ್ಟಣದ ಗಮಕಿ ಕೆ.ವಿ. ಚಂದ್ರಮೌಳಿ ಮತ್ತು ದೇವನೂರು ವೆಂಕಟಸುಬ್ಬಯ್ಯ ಪೌರಣಿಕರವರಿಂದ ಲವಕುಶ ಗಮಕ ವಾಚನ ಕಾರ್ಯಕ್ರಮ ಮತ್ತು ರಾಜ್ಯಪ್ರಶಸ್ತಿ ವಿಜೆತ ಸ್ವಾತಿ.ಪಿ. ಭಾರದ್ವಾಜ್ ಮತ್ತು ಸಂಗಡಿಗರಿಂದ ದಾಶವಾತರ ನೃತ್ಯ ರೂಪಕ ಮತ್ತು ಭರತನಟ್ಯ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದು ಪ್ರೇಕ್ಷಕರಿಗೆ ರಸದೌತಣ ನೀಡಿದವು.
ಜಾವಗಲ್‌ನಲ್ಲಿ ಹಬ್ಬದ ವಾತಾವರಣ ಏರ್ಪಟ್ಟು ಸಹಸ್ರರು ಭಕ್ತರು ದೇಗುಲಕ್ಕೆ ಬಂದು ಪೂಜೆಸಲ್ಲಿಸಿ ಭಕ್ತಿಗೌರವ ಸಮರ್ಪಿಸಿದರು.
ಮೇಲುಕೊಟೆಯ ಕುಮಾರಿ ರಮ್ಯಶ್ರೀ ಎಂ.ಎಸ್. ಸಾಗರ್ ಅವರ ಸ್ಯಾಕ್ಸೋಫೋನ್ ವಾದನ ಮೇಲುಕೋಟೆ ಆಸ್ತಾನ ಶ್ರೀನಿವಾಸ್, ಪಾರ್ಥಸಾರಥಿ ಅವರ ಮೃದಂಗ ವಾದನ ಪ್ರೇಕ್ಷಕರ ಮನಸೂರೆಗೊಳಿಸಿದವು.
ಎಂ. ರಾಜೀವ್‌ರವರ ಆಚಾರ್ಯ ಸತ್ವದಲ್ಲಿ ಅಷ್ಟನಿದ್ವಾದಶಾಕ್ಷರಿ ದಾತಾದಿಯಾಗಿ ಪೂರ್ಣಾಹುತಿ, ಮಹಾಭಿಷೇಕ ಕುಂಭಾಭಿಷೇಕ ಪುಷ್ಪವೃಷ್ಟಿ, ಬಲಿಹರಣ, ಕದಳೀ ವೃಕ್ಷವೇದನೆ, ಕೂಷ್ಮಾಂಡ, ನಿವೇದನೆ ಅಷ್ಟಾವಹಾನ ಸೇವೆಮಹಾ ಮಂಗಳಾರತಿ ನಡೆದು ತೀರ್ಥ ಪ್ರಸಾದ ವಿನಿಯೋಗ ಮೊದಲಾಯಿತು.  ಕಾರ್ಯಕ್ರಮಕ್ಕೆ ಹಾಜರಾಗಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
 ಕಳಸಾಪುರ ಬೆಳವಾಡಿ, ಜಾವಗಲ್ ವಿಪ್ರ ಮಹಿಳೆಯರಿಂದ ಲಲಿತಾ ವಿಷ್ಣು ಸಹಸ್ರನಾಮ ಕೀರ್ತನೆಗಳು, ಭಜನೆ ಕಾರ್ಯಕ್ರಮಕ್ಕೆ ಮೆರುಗು ನೀಡಿದವು.
ನಾಡಿನ ಬೆಂಗಳೂರು, ಮೈಸೂರು, ಹಾಸನ, ಮಂಡ್ಯ, ಚಿಕ್ಕಮಗಳೂರು, ಶಿವಮುಗ್ಗ ಸೇರಿದಂತೆ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ವೃತ್ತ ನಿರೀಕ್ಷಕ ಗಂಗಾಧರಪ್ಪ, ಉಪ ತಹಸೀಲ್ದಾರ್ ಅಶೋಕ್ ಭಾಗವಹಿಸಿದ್ದರು. ಸಂಸ್ಕೃತ ವಿದ್ವಾನ್ ಎಸ್.ವಿ. ಶಾಮಧವ್ ಬೆಳವಾಡಿ ಸೀತಾರಾಮ ಜೋಯಿಸ್, ನರಸಿಂಹ ಜೋಯಿಸ್, ಸೋಮ ಸುಂದರಭಟ್, ದೇಗುಲ ಸಮಿತಿ ಅಧ್ಯಕ್ಷ ಜೆ.ಆರ್. ವಸಂತಕುಮಾರ್, ಜೆ.ಎಸ್.ನರಸಿಂಹಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement