ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ
ಬೇಲೂರು: ತಾಲೂಕಿನಲ್ಲಿ ಯುವಕರನ್ನು ಸಂಘಟಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ಆಹ್ವಾನಿತ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಯುವ ಜನತಾದಳದವತಿಯಿಂದ ಆಯೋಜಿಸಲಾಗಿದೆ ಎಂದು ಯುವ ಮುಖಂಡ ಹಾಗೂ ಪುರಸಭೆ ಸದಸ್ಯ ಟಿ.ಎ. ಶ್ರೀನಿಧಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಫೆ. 7ರಿಂದ 9ರ ವರೆಗೆ ಇಲ್ಲಿನ ಜೂನಿಯರ್ ಕಾಲೇಜ್ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು ಪಂದ್ಯಾವಳಿಯನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಉದ್ಘಾಟಿಸಲಿದ್ದಾರೆ. ರಾಜ್ಯಾದ್ಯಂತ 30ಕ್ಕೂ ಹೆಚ್ಚು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ ಎಂದರು.
ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಪ್ರಥಮ ಬಹುಮಾನ ರು. 55,555, ದ್ವಿತೀಯ ಬಹುಮಾನ ರು. 33, 333 ಹಾಗೂ ನಾನಾ ಪಾರಿತೋಷಕಗಳನ್ನು ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಯುವ ಜನತಾದಳದ ಅಧ್ಯಕ್ಷ ಬಾಣಸವಳ್ಳಿ ಅಶ್ವತ್ ಪದಾಧಿಕಾರಿಗಳಾದ ಮಹೇಶ್, ಪುರಸಭೆ ಮಾಜಿ ಸದಸ್ಯ ಮಹಮದ್ ಫಾರುಕ್, ಪುರಸಭೆ ಸದಸ್ಯ ರವಿ ಅಣ್ಣೇಗೌಡ, ನವಿಲಹಳ್ಳಿ ನಾಗರಾಜು, ಹಗರೆ ಈಶ್ವರ್, ಮಹೇಶ್ ಇದ್ದರು.
ಜನಮನ ಸೂರೆಗೊಂಡ ತ್ಯಾಗರಾಜರ ಆರಾಧನೆ
ಅರಸೀಕೆರೆ: ಪಟ್ಟಣದಲ್ಲಿ ತ್ಯಾಗರಾಜರ ಆರಾಧನೆ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷತೆ ವಹಿಸಿದ್ದ ಮಾತಂಗ ಸಂಗೀತ ಶಾಲೆಯ ಮುಖ್ಯಸ್ಥೆ ಶ್ರೀಮತಿ ಮಂಗಳ ಮೂರ್ತಿ ಮಾತನಾಡಿ, 9 ವರ್ಷಗಳಿಂದ ನಮ್ಮ ಸಂಗೀತ ಶಾಲೆಯಲ್ಲಿ ತ್ಯಾಗರಾಜರ ಆರಾಧನಾ ಕಾರ್ಯಕ್ರಮವನ್ನು ಅದ್ಧೂರಿಯಿಂದ ಆಚರಿಸಲಾಗಿದ್ದು, ಸಂಗೀತ ಪ್ರಿಯರಿಗೆ ಉತ್ತೇಚನ ನಿಡುವ ಸಲುವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಲಾ ರಸಿಕರಿಗೆ ರಸದೌತಣ ನೀಡಲಾಯಿತು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪುರಸಭೆ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ತ್ಯಾಗರಾಜರ ಸಂಕೀರ್ತನೆ, ಭಜನೆ, ತತ್ವಗಳನ್ನು ಕೊಂಡಾಡಿದರು.
ಭದ್ರಾವತಿಯ ಸಂಗೀತ ವಿದ್ವಾನ್ ಕೆ.ಸಿ. ಹಿರಿಯಣ್ಣ ಅವರನ್ನು ಎಸ್.ಎಲ್.ಎನ್.ವಿದ್ಯಾಸಂಸ್ಥೆಯ ಚೇರ್ಮನ್ ಎನ್.ಎಲ್. ಕುಮಾರ್ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಚಂದ್ರಶೇಖರ್ ಭಾರತಿ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ವಿಶ್ವನಾಥ್, ಕಾಮೇಶ್ವರಿ ಭಟ್, ರೇಖಾ ಕುಮಾರ್, ಸೌಮ್ಯ ವೀಣಾಶೇಷಚಾರ್ ಮತ್ತಿತರರು ಇದ್ದರು.
28ರಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ
ಹಾಸನ: 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ. 28 ಮತ್ತು ಮಾ. 1ರಂದು ಹಾಸನಾಂಬ ಕಲಾ ಕ್ಷೇತ್ರದಲ್ಲಿ ನಡೆಸಲು ಜಿಲ್ಲಾ ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ತೀರ್ಮಾನಿಸಿದೆ. ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸಿ.ಕೆ. ಹರೀಶ್ ತಿಳಿಸಿದ್ದಾರೆ. ಮುಂದಿನ ಕಾರ್ಯಕಾರಿ ಸಭೆಯಲ್ಲಿ ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಅವರು ವಿವರಿಸಿದ್ದಾರೆ.
ಬಾಲಮಂದಿರದ ವಾರ್ಷಿಕೋತ್ಸವ
ಹಾಸನ: ನಗರದ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಇತ್ತೀಚೆಗೆ ವಾರ್ಷಿಕೋತ್ಸವ ಸಮಾರಂಭ ಆಚರಿಸಲಾಯಿತು. ಇಲಾಖೆಯ ಉಪನಿರ್ದೇಶಕ ಹೆಚ್.ಸಿ. ಚಿದಾನಂದ್ ಮಾತನಾಡಿ, ಸಂಸ್ಥೆಯಲ್ಲಿ ನೀಡಿರುವ ವ್ಯವಸ್ಥೆಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾಭ್ಯಾಸದಲ್ಲಿ ಉನ್ನತಮಟ್ಟದಲ್ಲಿ ಓದಿ, ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹಿತನುಡಿ ಹೇಳಿದರು.ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಎಂ.ಎಸ್. ಮಧುರಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿ. ಗೀತಾ, ಮಕ್ಕಳ ಸಹಾಯವಾಣಿ ಮುಖ್ಯಸ್ಥೆ ಸಿ.ಸಿ. ಪೌಲೊಸ್, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಪಾರ್ವತಿ, ಮುಖ್ಯೋಪಾಧ್ಯಾಯಿನಿ ಗಾಯತ್ರಿ ಇದ್ದರು.
ಅಧ್ಯಾತ್ಮಿಕ ವಿಶೇಷ ಜಾಗೃತಿ ಶಿಬಿರ
ಹಾಸನ: ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರ ವತಿಯಿಂದ ಇತ್ತೀಚೆಗೆ ನಗರದ ಕೆ.ಆರ್. ಪುರಂನ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಆಧ್ಯಾತ್ಮಿಕ ನಿಯಮಗಳ ಕುರಿತು ವಿಶೇಷ ಜಾಗೃತಿ ಶಿಬಿರ ಏರ್ಪಡಿಸಲಾಗಿತ್ತು.
ಶಿಬಿರದಲ್ಲಿ ರಾಜ್ಯ ಸಂಯೋಜಕ ಉಮೇಶ್ವರರಾವ್, ಜಿಲ್ಲಾಧ್ಯಕ್ಷ ಕಾಳೇಗೌಡ, ಬಿ. ಚೀಲೂರಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ದಿನೇಶ್ ಇದ್ದರು.
ಸರ್ವೋದಯ ಮೇಳ 10ರಿಂದ
ಹಾಸನ: ರಾಜ್ಯ ಸರ್ವೋದಯ ಮಂಡಳಿ ವತಿಯಿಂದ ಫೆ. 10ರಿಂದ 12ರವರೆಗೆ ಶ್ರೀರಂಗ ಪಟ್ಟಣದ ಪಶ್ಚಿಮ ವಾಹಿನಿ ದಡದಲ್ಲಿರುವ ಸುಬ್ರಹ್ಮಣ್ಯೇಶ್ವರ ಕಲ್ಯಾಣ ಮಂಟಪದಲ್ಲಿ ಸರ್ವೋದಯ ಮೇಳ ಏರ್ಪಡಿಸಲಾಗಿದೆ. ಸರ್ವೋದಯ ಕಾರ್ಯಕರ್ತರು, ಸ್ವಾತಂತ್ರ್ಯ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಚಿತಾಭಸ್ಮವನ್ನು 1948ರ ಫೆ. 12ರಂದು ವಿಶ್ವದ ಅನೇಕ ಪುಣ್ಯ ನದಿಗಳಲ್ಲಿ ವಿಸರ್ಜನೆ ಮಾಡಲಾಯಿತು. ಅಂದಿನಿಂದ ದೇಶಾದ್ಯಂತ ಹುತಾತ್ಮರ ಸರ್ವೋದಯ ಮೇಳವನ್ನು ಆಚರಿಸಲಾಗುತ್ತಿದೆ. ಎಲ್ಲಾ ಸರ್ವೋದಯ ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳ ಬಹುದು.
ನಾಯಿಗಳ ದಾಳಿ: 12 ಕುರಿ ಸಾವು
ಅರಸೀಕೆರೆ: ಕುರಿ ಕೊಟ್ಟಿಗೆಯ ಮೇಲೆ ಏಕ ಕಾಲದಲ್ಲಿ 15 ನಾಯಿಗಳು ದಾಳಿ ನಡೆಸಿದ ಪರಿಣಾಮ 12 ಕುರಿಗಳು ಸಾವನಪ್ಪಿದ್ದರೆ 7 ಕುರಿಗಳು ತೀವ್ರಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ತಾಲ್ಲೂಕಿನ ಜಾವಗಲಲ್ಹೋಬಳಿ ಕೆರೆ ಕೋಡಿಹಳ್ಳಿ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ. ಗ್ರಾಮದ ನಂಜುಂಡೇಗೌಡ ಎಂಬುವವರಿಗೆ ಸೇರಿದ ಈ ಕೊಟ್ಟಿಗೆಯಲ್ಲಿ ಮಂಗಳವಾರ ರಾತ್ರಿ ಕುರಿಗಳನ್ನು ಕೂಡಿ ಹಾಕಿ ರಾತ್ರಿ ಮಲಗಿದ್ದಾಗ ಮಧ್ಯರಾತ್ರಿ ವೇಳೆ ದಿಢೀರನೇ ನಾಯಿಗಳು ದಾಳಿ ನಡೆಸಿದ್ದರಿಂದ ಈ ಅವಘಡ ಸಂಭವಿಸಿದ್ದು ಸ್ಥಳಕ್ಕೆ ಪಶು ವೈದ್ಯ ಹಾಗೂ ಪೊಲೀಸ್ ಇಲಾಖೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮತದಾರರ ಹೆಸರು ಪರಿಶೀಲನೆಗೆ ಲಭ್ಯ
ಹಾಸನ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜ. 1ನೇ ದಿನಾಂಕವನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಿ ಮತದಾರರ ಪಟ್ಟಿಗಳ ಸಂಕ್ಷಿಪ್ತ ಪರಿಷ್ಕರಣೆಯನ್ನು ಕೈಗೊಳ್ಳಲಾಗಿತ್ತು. ಈ ಸಂಬಂಧ ಜ. 31ರಂದು ಜಿಲ್ಲೆಯ ಎಲ್ಲಾ ಮತದಾನ ಕೇಂದ್ರಗಳಲ್ಲಿ ಮತ್ತು ನಿಗದಿಪಡಿಸಿದ ನಿರ್ದಿಷ್ಟ ಕೇಂದ್ರಗಳಲ್ಲಿ ಮತದಾರರ ಪಟ್ಟಿಗಳನ್ನು ಅಂತಿಮವಾಗಿ ಪ್ರಚುರಪಡಿಸಲಾಗಿದೆ.
ಜಿಲ್ಲೆಯ ಎಲ್ಲಾ ಭಾಗಗಳ ಮತದಾರರ ಪಟ್ಟಿಗಳನ್ನು ಜಿಲ್ಲೆಯ ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಜಿಲ್ಲಾಧ್ಯಕ್ಷರಿಗೆ ಈ ಕಚೇರಿಯಿಂದ ನೀಡಲಾಗಿರುತ್ತದೆ ಹಾಗೂ ಜಿಲ್ಲೆಯ ಸಂಬಂಧಪಟ್ಟ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳ ಬಳಿ ತಾಲೂಕು ಕಚೇರಿ ಉಪವಿಭಾಗಾಧಿಕಾರಿ ಕಚೇರಿ ಹಾಗೂ ಈ ಕಚೇರಿಯಲ್ಲಿ ಮತದಾರರರು ಅವರ ಹೆಸರು ನೋಂದಣಿ ಆಗಿರುವ ನಮೂದುಗಳು ಇರುವ ಬಗ್ಗೆ ಪರಿಶೀಲನೆಗಾಗಿ ಲಭ್ಯವಿದೆ. ವೆಬ್ ಸೈಟ್ ವಿಳಾಸ ಡಿಡಿಠ:ಢಿಢಿಢಿ.ಜ್ಛ್ಝ.ಟ್ಝ್ಛಿ.್ಝಟಿ ಅಥವಾ ಡಿಡಿಠ.ಢಿಢಿಢಿ.್ಛಜ್ಟ್ಞಛ್ಠಟಿಛಡಿಛ್ಞಛ.್ಞಛ್ಠ.ಟ್ಝ್ಛಿ.್ಝಟಿರಲ್ಲಿಯೂ ಸಹ ಮತದಾರರ ಹೆಸರುಗಳು ನೋಂದಣಿ ಆಗಿರುವ ಬಗ್ಗೆ ಪರಿಶೀಲಿಸಬಹುದಾಗಿದೆ.
ತಹಸೀಲ್ದಾರ್ ನಾಗರಾಜ್ಗೆ ಸನ್ಮಾನ
ನುಗ್ಗೇಹಳ್ಳಿ: ಇಲ್ಲಿಗೆ ಸಮೀಪದ ನವಿಲೆ ನಾಗೇಶ್ವರಸ್ವಾಮಿ ದೇವಾಲಯದಲ್ಲಿ ಅತ್ಯುತ್ತಮ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ತಹಸೀಲ್ದಾರ್ ಡಾ.ಎಚ್.ಎಲ್. ನಾಗರಾಜ್ ಅವರಿಗೆ ತಾಲೂಕು ಅಖಿತ ಭಾರತ ವೀರಶೈವ ಮಹಾಸಭಾದ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಐಎಎಸ್ ಅಧಿಕಾರಿ ರಾಮಚಂದ್ರನ್, ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಎನ್. ಪಿ. ರಮೇಶ್, ಪರಿಸರ ಪ್ರೇಮಿ ಅಶೋಕ್, ಸಮಾಜ ಸೇವಕ ಪ್ರಕಾಶ ಜೈನ್, ನಂಜೇಗೌಡ, ಕೃಷಿ ಪತ್ತಿನ ಅಧ್ಯಕ್ಷ ಬಿ.ಪಿ ನಾಗರಾಜು, ಗ್ರಾಪಂ ಮಾಜಿ ಅದ್ಯಕ್ಷ ಎನ್.ಕೆ. ನಾಗಪ್ಪ, ಯಶಸ್ವಿನಿ, ಅಮೃತ ಇದ್ದರು.
ಇಂದು ಗಾಂಧಿ ಅಧ್ಯಯನ ಕೇಂದ್ರ ಉದ್ಘಾಟನೆ
ಹಾಸನ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಉದಯಪುರ, ಚನ್ನರಾಯಪಟ್ಟಣ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ಇವರ ಸಹಯೋಗದಲ್ಲಿ ಗಾಂಧೀ ಅಧ್ಯಯನ ಕೇಂದ್ರ ಉದ್ಘಾಟನೆ ಮತ್ತು ಗಾಂಧಿ ವಿಚಾರಗಳ ಪ್ರಚಾರಾಂದೋಲನ ಕಾರ್ಯಕ್ರಮ ಫೆ. 6ರಂದು ಮಧ್ಯಾಹ್ನ 12ಕ್ಕೆ ಉದಯಪುರದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆಯಲಿದೆ.
ಪ್ರಾಂಶುಪಾಲ ಪ್ರೊ. ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸುವರು. ಡಾ. ಹೊ. ಶ್ರೀನಿವಾಸಯ್ಯ, ಅಧ್ಯಕ್ಷರು, ಕರ್ನಾಟಕ ಗಾಂಧಿ ಶಾಂತಿ ಪ್ರತಿಷ್ಠಾನ ಬೆಂಗಳೂರು ಇವರು ಕಾರ್ಯಕ್ರಮ ಉದ್ಘಾಟಿಸುವರು. ಡಾ. ವುಡೇ ಪಿ. ಕೃಷ್ಣ ಬೆಂಗಳೂರು ಗಾಂಧೀ ಶಾಂತಿ ಪ್ರತಿಷ್ಠಾನ, ಬೆಂಗಳೂರು ಇವರು ಕಾರ್ಯಕ್ರಮ ಕುರಿತು ವಿಶೇಷ ಉಪನ್ಯಾಸ ನೀಡುವರು. ವಾರ್ತಾ ಇಲಾಖೆ ಉಪನಿರ್ದೇಶಕ ಹೆಚ್.ಬಿ. ದಿನೇಶ್ ಗಾಂಧೀ ಭಾವಚಿತ್ರ ಅನಾವರಣ ಮಾಡುವರು. ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಚಂದ್ರಮೌಳೇಶ್ವರಸ್ವಾಮಿ ಅವರು ಉಚಿತ ಪುಸ್ತಕ ವಿತರಣೆ ಮಾಡುವರು.
ವಾರ್ತಾ ಇಲಾಖೆ ಜಂಟಿ ನಿರ್ದೇಶಕರಾದ ಡಾ. ಬಿ.ಆರ್. ಮಮತಾ, ಚನ್ನರಾಯಪಟ್ಟಣ ತಹಸೀಲ್ದಾರ್ ಡಾ.ಹೆಚ್.ಎಲ್. ನಾಗರಾಜ್, ಭಾರತೀಯ ಆಡಳಿತ ಸೇವೆ ಅಧಿಕಾರಿ ರಾಮಚಂದ್ರನ್, ಗಾಂಧಿ ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ.ಜಿ.ಬಿ. ಶಿವರಾಜು, ಶಿವಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.