ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಾತಿ ಪದ್ಧತಿ ಎಲ್ಲರಿಗೂ ಒಗ್ಗದು

Vishwanath S
Updated On : 7 Feb 2014, 11:15 am

ಕ.ಪ್ರ.ವಾರ್ತೆ , ಅರಸೀಕೆರೆ , ಫೆ. 7
ಯಾದವ ಸಮುದಾಯ ರಾಜಕೀಯವಾಗಿ, ಶಕ್ತಿಯುತವಾಗಿ ಸಮಾಜ ಮುಖ್ಯವಾಹಿನಿಗೆ ಬರಬೇಕು. ಹಿನ್ನಡೆಯಲ್ಲಿರುವ ಈ ಜನಾಂಗವು ಈಗ ಚಿಂತನೆ ಮಾಡುವ ಅವಶ್ಯಕತೆ ಇದೆ. ಜಾತಿ ಪದ್ದತಿ ಕೆಲವರಿಗೆ ಅನುಕೂಲವಾದರೆ ಮತ್ತೆ ಕೆಲವರಿಗೆ ಶಾಪವಾಗಿ ಪರಿಣಮಿಸಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕಿನ ಕಣಕಟ್ಟೆ ಹೋಬಳಿ ಗೋಪಾಲಪುರದಲ್ಲಿ ಆಯೋಜಿಸಿದ್ದ ನೂತನ ದೇವಾಲಯ ಉದ್ಘಾಟನೆ ಹಾಗೂ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದ ಗೌಡರು, ಭಾರತೀಯ ಸನಾತನ ಸಂಸ್ಕೃತಿ ಮತ್ತು ಸಮಾಜದ ಏಳಿಗೆಗೆ ತಮ್ಮದೇ ಆದ ಕೊಡುಗೆ ಣೀಡಿದ ಸಾಧು- ಸಂತರ ನಾಡು ಇಂದು ಕಲುಷಿತಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಯಾಗಿದೆ. ಅಲ್ಲದೇ ದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಭ್ರಷ್ಟಾಚಾರ ಮಿತಿ ಮೀರಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗಿದೆ ಎಂದು ಅವರು ವಿಷಾದಿಸಿದರು.
ಸರ್ವಜ್ಞರಲ್ಲ: ಸಂತರು, ಸ್ವಾಮೀಜಿಗಳು ಶಾಂತಿ ಸಂದೇಶ ಸಾರುವ ಮೂಲಕ ಸಮಾಜದ ಉದ್ದಾರಕ್ಕಾಗಿ ಶ್ರಮಿಸಿದ್ದಾರೆ. ಆತಂಹ ಈ ನಾಡಿನಲ್ಲಿ ಈಗ ಹೇಯ ಕೃತ್ಯಗಳು ಹಾಗೂ ಸಮಸ್ಯೆಗಳು ಉದ್ಭವಿಸುತ್ತಿರುವುದು ಏಕೆ ಎಂಬುದು ತಿಳಿಯುತ್ತಿಲ್ಲ. ರಾಜಕಾರಣದಲ್ಲಿ ಪ್ರತಿದಿನ ವಿದ್ಯಾರ್ಥಿ ಎಂಬುದನ್ನು ಜನಪ್ರತಿನಿಧಿಗಳು ಅರಿತು ಆಡಳಿತ ನಡೆಸಬೇಕು. ಆಡಳಿತ ಸಿಕ್ಕ ತಕ್ಷಣ ತಾವು ಸರ್ವಜ್ಞರೆಂದು ಭಾವಿಸಬಾರದು ಎಂದರು.
ಜೆಡಿಎಸ್ ಬೆಂಬಲಿಸಿ: ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಮಾತನಾಡಿ, ಸಮಾಜದ ಪ್ರಗತಿ ಸಹಿಸದ ಕಾಂಗ್ರೆಸ್‌ನಲ್ಲಿನ ಕೆಲವರು ನನಗೆ ರಾಜಕೀಯ ಸ್ಥಾನಮಾನ ಸಿಗದಂತೆ ಕಳೆದ ಚುನಾವಣೆಯಲ್ಲಿ ಒಳಸಂಚು ನಡೆಸಿದರು. ಆದರೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ಕುಮಾರ ಸ್ವಾಮಿ ಅವರು ಸಮಾಜದ ಅಭಿವೃದ್ಧಿಗಾಗಿ ನನಗೆ ರಾಜ್ಯಮಟ್ಟದ ಜವಾಬ್ದಾರಿ ನೀಡಿದ್ದಾರೆ. ರಾಜ್ಯದಲ್ಲಿ ಜನಾಂಗಕ್ಕೆ ಬೇಕಾದ  ಮೀಸಲಾತಿ ಪಡೆಯಲು ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಶಿವಲಿಂಗೇಗೌಡ ಅವರು, ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ದೇವೇಗೌಡ ಅವರೆ, ಆದ್ದರಿಂದ ಅವರ  ಗೆಲುವಿಗೆ ನಾವೆಲ್ಲರೂ ಹಗಲಿರುಳು ಶ್ರಮಿಸಿ ಅವರನ್ನು ಬಾರೀ ಬಹುಮತದಿಂದ ಜಯಶೀಲರನ್ನಾಗಿ ಮಾಡೋಣ ಎಂದು ಅವರು ತಿಳಿಸಿದರು.
ಮಾಜಿ ಶಾಸಕ ಜಿ.ಎಸ್. ಪರಮೇಶ್ವರಪ್ಪ, ಜಿಪಂ ಉಪಾಧ್ಯಕ್ಷ ಬಿಳಿ ಚೌಡಯ್ಯ ಮಾತನಾಡಿದರು. ಜಿಪಂ ಸದಸ್ಯೆ ಪಾರ್ವತಮ್ಮ, ಮಾಜಿ ಸದಸ್ಯ ಕೆ.ಪಿ. ಶಿವಮೂರ್ತಿ, ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ಗೊಲ್ಲರಹಳ್ಳಿ ಹನುಮಪ್ಪ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ, ಮಾಜಿ ಅಧ್ಯಕ್ಷ ಮುರುಂಡಿ ಶಿವಯ್ಯ, ಯಾದವ ಸಮಾಜದ ಮುಖಂಡರಾದ ಬಂಡೀಗೌಡರ ರಾಜಣ್ಣ, ಜವನಪ್ಪ, ಚಿಕ್ಕೂರು ಪ್ರಭುದೇವ್, ಬಸವಲಿಂಗಪ್ಪ ಉಪಸ್ಥಿತರಿದ್ದರು.
'ಸ್ವಾರ್ಥ ರಾಜಕಾರಣದಿಂದ ನಿರೀಕ್ಷಿತ ಫಲಿತಾಂಶ ಇಲ್ಲ'
ಅರಸೀಕೆರೆ: ಸ್ವಾರ್ಥ ಮನೋಭಾವದಿಂದ ಯಾರೇ ರಾಜಕಾರಣ ಮಾಡಿದರೂ ನಿರೀಕ್ಷಿತ ಫಲಿತಾಂಶ ಸಿಗಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಹಾಗು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಕಲ್ಲುಸಾದರಹಳ್ಳಿ ಸಮೀಪದಲ್ಲಿ ನೂತನ ದೇವಾಲಯ ಪ್ರಾರಂಭೋತ್ಸವದ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾರ್ಥ ನಿರೀಕ್ಷಿತ ಫಲ ಸಿಗದು ಎಂಬ ತಿಳುವಳಿಕೆಯನ್ನು ನಾನು ಜೀವನದಲ್ಲಿ ಹೊಂದಿದ್ದೇನೆ, 99 ರಲ್ಲಿ ಜೆಡಿಎಸ್ ಪಕ್ಷವನ್ನು ಬುಡಸಮೇತ ಕಿತ್ತು ಹಾಕಿದವರಾರು ಎಂದು ಪ್ರಶ್ನಿಸಿದ ಅವರು ಮುಂಬರಲಿರುವ ಚುನಾವಣೆಯಲ್ಲಿ ರಾಜ್ಯದ ಜನತೆ ನಮ್ಮ ಪಕ್ಷದ ಅಧಿಕ ಸಂಖ್ಯೆಯ ಸಂಸದರನ್ನು ಕಳಿಸಿಕೊಡಲಿದ್ದಾರೆ. 2004ರಲ್ಲಿ ಸಮ್ಮಿಶ್ರ ಸರಕಾರ ಹೋಗಲು ಯಾರು ಕಾರಣ 2 ಹಂತಗಳಲ್ಲಿ ಡಿಸಿಎಂ ಹುದ್ದೆ ಸೃಷ್ಟಿಯಾಗಲು ಯಾರು ಕಾರಣ 80 ಸಂವತ್ಸರ ದಾಟಿದ್ದೇನೆ. ರಾಜಕಾರಣಕ್ಕೆ ಬಂದು 52 ವರ್ಷಗಳು ಕಳೆದಿದ್ದು, ಜೆಡಿಎಸ್ ಅನ್ನು ಸದೃಢಗೊಳಿಸುವುದೇ ನನ್ನ ಗುರಿ ಎಂದ ಅವರು ಘೋಷಿಸಿದರು.
ಅಂತಿಮ ಹೋರಾಟ: ಮೋದಿ ಅಲೆ ಕುರಿತಂತೆ ಗಮನ ಸೆಳೆದಾಗ ನೀವೇ ಗೆಲ್ಲಿಸಿ. ಮಾಧ್ಯಮಗಳು ಹೆಚ್ಚು ಪ್ರಚಾರ ನೀಡುತ್ತಿವೆ ಎಂಬುದನ್ನು ಪರೋಕ್ಷವಾಗಿ ಹೇಳಿದ ಅವರು ಇದು ನನ್ನ ಅಂತಿಮ ಹೋರಾಟ ಎಂದರು. ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಅಧ್ಯಕ್ಷ ಕೃಷಪ್ಪ, ಶಾಸಕ ಕೆ.ಎಂ.ಶಿವಲಿಂಗೇಗೌಡ ಉಪಸ್ಥಿತರಿದ್ದರು.
ಮೋದಿಗೆ  ಸೂಕ್ತ ಉತ್ತರ
ಹಾಸನ: ತೃತಿಯ ರಂಗ ರಚನೆ ಆಗಿರುವುದರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ನರೇಂದ್ರ ಮೋದಿ ಅವರಿಗೆ ನಾನು ಸೂಕ್ತ ವೇದಿಕೆಯಲ್ಲಿ ತಕ್ಕ ಉತ್ತರ ನೀಡುವುದಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 11 ಪ್ರಾದೇಶಿಕ ಪಕ್ಷಗಳೊಟ್ಟಿಗೆ ತೃತಿಯ ರಂಗದ ಮೊದಲ ಸಭೆ ಯಶಸ್ವಿಯಾಗಿ ನಡೆದಿದ್ದು, ಬಿಜೆಪಿ, ಕಾಂಗ್ರೆಸ್‌ಗೆ ನಡುಕ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ಸಹಿಸಲಾರದೆ  ಮೋದಿ ಅವರು  ಕೀಳು ಮಟ್ಟದ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಅವರು ಹೇಳಿದರು.
'ದೇವರ ಇಚ್ಛೆಯಂತೆ ಬದುಕಿದ್ದೇನೆ'
ದೇವೇಗೌಡ ಅವರು ಹೋಗಿಯೇ ಬಿಟ್ಟರು ಎಂದು ಹಲವು ಮಂದಿ ಸಂಭ್ರಮಿಸಿದ್ದರು. ಭಗವಂತನ ಇಚ್ಚೆಯಂತೆ ಇನ್ನೂ ಬದುಕಿದ್ದೇನೆ ಎಂದು ದೇವೇಗೌಡ ಹೇಳಿದರು. ದೇವೇಗೌಡರನ್ನು ಮುಗಿಸುವುದು ಯಾರಿಂದಲೂ ಸಾಧ್ಯವಿಲ್ಲ. ಫಿನಿಕ್ಸ್ ಪಕ್ಷಿಯಂತೆ  ಮತ್ತೆ ಧೂಳಿನಿಂದ ಎದ್ದು ಬರುತ್ತೇನೆ. ಈ ರಾಜ್ಯದ ಋಣ ತೀರಿಸುತ್ತೇನೆ. ತನ್ನ ಮೇಲೆ ಯಾವುದೇ ಪ್ರಕರಣಗಳಿಲ್ಲ. ಆದರೂ ಪ್ರತಿನಿತ್ಯ  ನನ್ನ ಜಪ ಮಾಡುತ್ತಾರೆ ಎಂದು ಅವರು ಟೀಕಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement