ಇಂದು ಪ್ರತಿಷ್ಠಾಪನೆ ಮಹೋತ್ಸವ
ಹಾಸನ: ತಾಲೂಕಿನ ಶಾಂತಿಗ್ರಾಮ ಹೋಬಳಿಯ ಮುತ್ತಿಗೆಹಿರೇಹಳ್ಳಿಯಲ್ಲಿ ಫೆ. 10ರಂದು ಮುಕ್ಕಣ್ಣೇಶ್ವರ, ಚೆನ್ನಾಂಬಿಕ (ಚಂಡಿಕಾಂಬ), ದೊಡ್ಡಮ್ಮ, ಚಿಕ್ಕಮ್ಮ ಹಾಗೂ ಪರಿವಾರ ದೇವತೆಗಳಾದ ದೇವತೆಗಳಾದ ವಿಘ್ನೇಶ್ವರ, ಮಾರಮ್ಮ, ದುರ್ಗಮ್ಮ ಮತ್ತು ಭೈರವೇಶ್ವರ ದೇವರ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವ ನಡೆಯಲಿದೆ. ಮಹೋತ್ಸವದ ಅಂಗವಾಗಿ ಫೆ. 9ರಂದು ಬೆಳಗ್ಗೆ ರತ್ನ್ಯಾಸಪೂರ್ವಕ ದೇವತಾಂಬಿಂಬ ಪ್ರತಿಷ್ಠಾಪನೆ, ಅಷ್ಟಬಂಧ ಸಂಯೋಜನೆ, ಕಲಾ ಹೋಮ, ತತ್ವ ಹೋಮ, ಪ್ರತಿಷ್ಠಾನ್ಯಾಸಾದಿಗಳು, ಸಂಜೆ ದೇವರ ಸನ್ನಿಧಿಯಲ್ಲಿ 108 ಬ್ರಹ್ಮಕುಂಭ ಪ್ರತಿಷ್ಠಾಪನೆ, ಅಧಿವಾಸ ಹೋಮ ನಡೆಯಲಿದೆ.ಎಚ್.ಡಿ.ದೇವೇಗೌಡ ಪಾಲ್ಗೊಳ್ಳುವರು.
ಇಂದು ವಿಗ್ರಹಗಳ ಪ್ರತಿಷ್ಠಾಪನೆ
ಹಾರನಹಳ್ಳಿ: ಬೆಟ್ಟದಪುರ ಗ್ರಾಮದ ಶ್ರೀ ರಂಗಸ್ವಾಮಿ ದೇವಾಲಯದಲ್ಲಿ ಫೆ. 9ರಂದು ಜಯವಿಜಯ ಗರುಡಗಂಬ ಶ್ರೀ ಗರುಡಳ್ವಾರ್ ಶ್ರೀರಾಮಾನುಜಾಚಾರ್ಯ ಶ್ರೀ ಆಂಡಾಳ್ ಶ್ರೀ ನಮ್ಮಾಳ್ವಾರ್ ಶ್ರೀ ತಿರುಮಂಗೈಯ್ ಆಳ್ವಾರ್ ವಿಗ್ರಹಗಳ ಪ್ರತಿಷ್ಠಾಪನಾ ಕಾರ್ಯನೆರವೇರಲಿದೆ.