ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಲ್ಲಾ ಸರ್ಕಾರಿ ನೌಕರರ ಸೇವಾ ವಿವರ ನೀಡಲು ಅಪರ ಜಿಲ್ಲಾಧಿಕಾರಿ ಸೂಚನೆ

Vishwanath S
Updated On : 9 Feb 2014, 12:51 pm

ಹಾಸನ: 2014ನೇ ಸಾಲಿನಲ್ಲಿ ನಡೆಯುವ ಲೋಕಸಭಾ ಸಾರ್ವತ್ರಿಕ ಚುಣಾವಣೆಗೆ ಸಂಬಂಧಿಸಿದಂತೆ, ಮತಗಟ್ಟೆ ಅಧಿಕಾರಿಗಳ ನೇಮಕಾತಿಗೆ ಹಾಸನ ಜಿಲ್ಲೆಯ ಮತಗಟ್ಟೆ ಅಧಿಕಾರಿಗಳನ್ನು ನೇಮಕಾತಿ ಮಾಡಲು ಹಾಸನ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರುಗಳ ಸೇವಾ ವಿವರಗಳನ್ನು ಎನ್.ಐ.ಸಿ. ಅವರ ಸಹಕಾರದಿಂದ ಅಭಿವೃದ್ಧಿಪಡಿಸಿರುವ ವಿಶೇಷ ತಂತ್ರಾಂಶದಲ್ಲಿ ನಮೂದು ಮಾಡಬೇಕಾಗಿದೆ.
ಇದಕ್ಕಾಗಿ ಈ ಕೆಳಕಂಡ ಅಂಶಗಳನ್ನು ಕಡ್ಡಾಯವಾಗಿ ಮತ್ತು ತಪ್ಪದೇ ಅನುಸರಿಸಲು ಹಾಸನ ಜಿಲ್ಲೆಯ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ, ವೇತನ ಬಟವಾಡೆ ಅಧಿಕಾರಿಗಳಿಗೆ, ಸಹಾಯಕ ಚುನಾವಣಾಧಿಕಾರಿಗಳಿಗೆ ಮತ್ತು ತಹಶೀಲ್ದಾರರಿಗೆ ತರಬೇತಿ ನೀಡಲು ಕ್ರಮಕೈಗೊಂಡಿದ್ದು, ಈ ಬಗ್ಗೆ ವೈಯುಕ್ತಿಕ ಗಮನಹರಿಸಿ ತಮ್ಮ ತಮ್ಮ ಕಚೇರಿಯಲ್ಲಿ ಈ ವಿಶೇಷ ತಂತ್ರಾಂಶದಲ್ಲಿ ಅಧಿಕಾರಿ, ನೌಕರರ ಸೇವಾ ವಿವರಗಳನ್ನು ನಮೂದು ಮಾಡಲು ಅಗತ್ಯ ಕ್ರಮವಹಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎನ್. ಗೋಪಾಲಕೃಷ್ಣ ಸೂಚಿಸಿದ್ದಾರೆ.
ಅಧಿಕಾರಿ, ನೌಕರರ ಸೇವಾ ವಿವರಗಳನ್ನು ಈಗಾಗಲೇ ಹೆಚ್.ಆರ್.ಎಂ.ಎಸ್. ಮೂಲಕ ಲಭ್ಯವಿರುವ ಮಾಹಿತಿಗಳನ್ನು ಪಡೆಯಲಾಗಿದ್ದರೂ, ಉಳಿದ ಅಗತ್ಯ ಮಾಹಿತಿಗಳನ್ನು  ಇದೇ ತಂತ್ರಾಂಶದಲ್ಲಿ ನಮೂದು ಮಾಡುವುದು. ಕಡ್ಡಾಯವಾಗಿ ಎಲ್ಲಾ ಅಧಿಕಾರಿ, ನೌಕರರ  ಸೇವಾ ವಿವರಗಳನ್ನು ನಮೂದು ಮಾಡುವುದು. (ಯಾವುದೇ ಅಧಿಕಾರಿ, ನೌಕರರನ್ನು ಕೈಬಿಡುವಂತಿಲ್ಲ). ಯಾವುದೇ ಸೇವಾ ವಿವರಗಳನ್ನು ನಮೂದಿಸದೇ ಕೈ ಬಿಟ್ಟಿದ್ದಲ್ಲಿ (ಅಧಿಕಾರಿ, ನೌಕರರ ಸೇವಾ ವಿವರಗಳ ಬಗ್ಗೆ ತಂತ್ರಾಂಶದಿಂದ ತಿಳಿದುಬರುವುದರಿಂದ) ಅಂತಹ ವೇತನ ಬಟವಾಡೆ ಅಧಿಕಾರಿ ವಿರುದ್ಧ ಯಾವುದೇ ಪೂರ್ವ ಸೂಚನೆ ನೀಡದೇ ಪ್ರಜಾ ಪ್ರತಿನಿಧಿ ಕಾಯ್ದೆ 1957 ರ ನಿಯಮ 32ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದಲ್ಲದೇ, ಶಿಸ್ತು ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಮತ್ತು ಸಂಬಂಧಿಸಿದ ಇಲಾಖೆಗೆ ವರದಿ ಮಾಡಲಾಗುವುದೆಂದು ಅಪರ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement