ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ರೇಲ್ವೆ ಪ್ರಯಾಣಿಕರ ಮೂಲಸೌಲಭ್ಯಕ್ಕೆ ಕ್ರಮ'

Vishwanath S
Updated On : 14 Feb 2014, 12:24 pm

ಅರಸೀಕೆರೆ: ರಾಜ್ಯದ ಪ್ರಮುಖ ರೇಲ್ವೆ ಜಂಕ್ಷನ್ ಕೇಂದ್ರಗಳಲ್ಲಿ ಒಂದಾದ ಅರಸೀಕೆರೆ  ರೇಲ್ವೆ ನಿಲ್ದಾಣವನ್ನು ಬಿ. ದರ್ಜೆಯಿಂದ ಎ. ದರ್ಜೆಗೆ ಪರಿವರ್ತಿಸುವ ಮೂಲಕ ಇಲ್ಲಿನ ರೇಲ್ವೆ ಪ್ರಯಾಣಿಕರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸೂಕ್ತ ಕ್ರಮಕೈಗೊಳ್ಳಲಾಗುತ್ತಿದೆ ಎಂದು ರಾಷ್ಟ್ರೀಯ ರೇಲ್ವೆ ಪ್ರಯಾಣಿಕರ ಸೌಲಭ್ಯ ಸಮಿತಿ ರಾಷ್ಟ್ರಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ರೇಲ್ವೆ ನಿಲ್ದಾಣಕ್ಕೆ ಬುಧವಾರ ಭೇಟಿ ನೀಡಿದ ಅವರು, ನಿಲ್ದಾಣದಲ್ಲಿನ ಪ್ಲಾಟ್ ಫಾರಂ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮೂಲ ಸೌಕರ್ಯ: ಕೇಂದ್ರ ಸರ್ಕಾರ ರಾಷ್ಟ್ರೀಯ ರೇಲ್ವೆ ಪ್ರಯಾಣಿಕರ ಸೌಲಭ್ಯ ಸಮಿತಿ ರಚಿಸಿದೆ ಎಂಬುವುದು ಸ್ವಾತಂತ್ರ್ಯ ಬಂದು 67 ವರ್ಷ ಕಳೆದರೂ ಅನೇಕ ರಾಜ್ಯಗಳ ಜನತೆಯ ಅರಿವಿಗೆ ಬಂದಿಲ್ಲ. ತಮ್ಮ ಅಧಿಕಾರದ ಅವಧಿಯಲ್ಲಿ ವ್ಯಾಪಕ ಪ್ರವಾಸ ಕೈಗೊಂಡು ರಾಜ್ಯದ ಎಲ್ಲಾ ಪ್ರಮುಖ ರೇಲ್ವೆ ನಿಲ್ದಾಣಗಳಿಗೆ ಬೇಟಿನೀಡಿದ್ದು, ಮೈಸೂರು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳು ಬಾಕಿ ಇದ್ದು, ಇಂದು ಅರಸೀಕೆರೆ ಮತ್ತು ಹಾಸನ ರೇಲ್ವೆ ನಿಲ್ದಾಣಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದರು.
ಅರಸೀಕೆರೆ ರೇಲ್ವೆ ನಿಲ್ದಾಣ ಪ್ರಮುಖ ಜಂಕ್ಷನ್ ಕೇಂದ್ರವಾಗಿದ್ದು, ಇಲ್ಲಿ ಪ್ರಯಾಣಿಕರಿಗೆ ಸುವ್ಯವಸ್ಥಿತ ಆಸನಗಳ ವ್ಯವಸ್ಥೆ, ವಿಶ್ವಾಂತಿ ಕೊಠಡಿಗಳ ನಿರ್ಮಾಣ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕುಡಿಯಲು ಪರಿಶುದ್ಧ ನೀರಿನ ಸೌಲಭ್ಯ ಹಾಗೂ ಸುಲಭ ಶೌಚಾಲಯಗಳ ನಿರ್ಮಾಣ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ, ನಾನಾ ಸಂಘಟನೆ ಪದಾಧಿಕಾರಿಗಳು ನಿಲ್ದಾಣದಲ್ಲಿನ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಅಧ್ಯಕ್ಷರಿಗೆ ಮನವಿ ಪತ್ರ ನೀಡಿದರು. ಈ ಸಂದರ್ಭದಲ್ಲಿ ಮೈಸೂರು ವಿಭಾಗೀಯ ರೈಲ್ವೆ ವಾಣಿಜ್ಯ ವ್ಯವಸ್ಥಾಪಕ  ಡಾ. ಸೆಂದಿಲ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಜ್ಜನಹಳ್ಳಿ ಬಸವರಾಜು, ಕೆಪಿಸಿಸಿ ಸದಸ್ಯ ಡಾ. ನವೀನ್ ಮನೀಯಾ ಹಾಗೂ ಸ್ಥಳೀಯ ಇನ್ನಿತರ ರೇಲ್ವೆ ನಿಲ್ದಾಣದ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement