ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೊಳೆನರಸೀಪುರ ತಾಪಂ ನೂತನ ಅಧ್ಯಕ್ಷೆ ಕುಸುಮ

Vishwanath S
Updated On : 14 Feb 2014, 11:22 am

ಹೊಳೆನರಸೀಪುರ: ಹೊಳೆನರಸೀಪುರ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಪುಷ್ಪಾಗೌಡೇಗೌಡ ಅವರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷೆ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆದು ನಿರೀಕ್ಷೆಯಂತೆಯೇ ಕುಸುಮ ಅವರು ನೂತನ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು.
ಕೇವಲ ಐದು ತಿಂಗಳಷ್ಟೇ ಅಧ್ಯಕ್ಷೆಯಾಗಿದ್ದ ಸಂಕನಹಳ್ಳಿ ತಾಪಂ ಕ್ಷೇತ್ರದ ಪುಷ್ಪಾಗೌಡೇಗೌಡ ಅವರು ತಮ್ಮ ಜೆಡಿಎಸ್ ನಾಯಕರ ಮೌಖಿಕ ನಿರ್ದೇಶನ ಮೇರೆಗೆ ಕಳೆದ ತಿಂಗಳು ತಮ್ಮ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿದ್ದರು. ನೂತನ ಅಧ್ಯಕ್ಷರ ಆಯ್ಕೆಗಾಗಿ ಶುಕ್ರವಾರ  ಇಲ್ಲಿನ ತಾಪಂ ಕಚೇರಿಯಲ್ಲಿ ಉಪ-ವಿಭಾಗಾಧಿಕಾರಿ ಶರತ್ ಅವರು ಚುನಾವಣಾಧಿಕಾರಿಯಾಗಿ ಆಗಮಿಸಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿದರು.
ಸಾಮಾನ್ಯ ಮಹಿಳೆಗೆ ಮೀಸಲು: ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷೆ ಸ್ಥಾನಕ್ಕೆ ಬಿದರಕ್ಕ ತಾಪಂ ಕ್ಷೇತ್ರದಿಂದ ಆಯ್ಕೆಗೊಂಡಿದ್ದ ಕುಸುಮಾ ಸಣ್ಣಸ್ವಾಮಿ ಅವರನ್ನು ಹೊರತುಪಡಿಸಿ ಬೇರಾರು ನಾಮಪತ್ರಸಲ್ಲಿಸದ ಕಾರಣದಿಂದಾಗಿ ಉಪ-ವಿಭಾಗಾಧಿಕಾರಿಗಳು ಕುಸುಮಾ ಸಣ್ಣಸ್ವಾಮಿ ಅವರ ಆಯ್ಕೆಯನ್ನು ಆಧಿಕೃತವಾಗಿ ಘೋಷಿಸಿದರು. ಇಲ್ಲಿನ ತಾ.ಪಂಯಲ್ಲಿ 15ಸ್ಥಾನಗಳಿದ್ದು 14ಸ್ಥಾನಗಳಲ್ಲಿ ಜೆಡಿಎಸ್ಹಾಗೂ ಕೇವಲ ಒಂದು ಸ್ಥಾನದಲ್ಲಿ ಕಾಂಗ್ರೆಸ್ಸ್‌ದಸ್ಯರಿದ್ದಾರೆ.
ಈಗಾಗಲೇ ಒಕ್ಕಲಿಗ ಸಮುದಾಯಕ್ಕೆ ಸೇರಿದ ಎನ್.ಆರ್.ಅನಂತಕುಮಾರ್ 20 ತಿಂಗಳ ಅವಧಿಗೆ, ವೀರಶೈವ ಸಮುದಾಯದ ಕೆ.ಎಂ.ಚಂದ್ರಮತಿ 10ತಿಂಗಳ ಅವಧಿಗೆ ಹಾಗೂ ವಕ್ಕಲಿಗ ಸಮುದಾಯದ ಕೆ.ಎಂ.ಪುಷ್ಪಾಗೌಡೇಗೌಡ ಅವರು 5ತಿಂಗಳ ಅವಧಿಗೆ ಇಲ್ಲಿನ ತಾಪಂ ಅಧ್ಯಕ್ಷರಾಗಿದ್ದರು.
ಹಿಂದುಳಿದ ಸಮುದಾಯಕ್ಕೆ: ಇದೀಗ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷೆ ಸ್ಥಾನಕ್ಕೆ ಜೆಡಿಎಸ್ ನಾಯಕ ಹಾಗೂ ಶಾಸಕರಾದ ಎಚ್.ಡಿ.ರೇವಣ್ಣ ಸೂಚನೆಯಂತೆ ಹಿಂದುಳಿದ ಸಮುದಾಯಕ್ಕೆ ಸೇರಿದ ಕುಸುಮಾ ಸಣ್ಣಸ್ವಾಮಿ ಅವರಿಗೆ ಅವಕಾಶ ನೀಡುವ ಮೂಲಕ ಶಾಸಕರು ಎಲ್ಲ ವರ್ಗಕ್ಕೂ ಸಮಾನ ಅವಕಾಶಗಳನ್ನು ನೀಡಿದ್ದು, ಪರಿಶಿಷ್ಟ ಸಮುದಾಯಕ್ಕೆ ಮುಂದಿನ ಅವಧಿಯಲ್ಲಿ ಮೀಸಲಾತಿಯು ಬದಲಾದಲ್ಲಿ ಅವಕಾಶವನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ತಾಪಂ ನೂತನ ಅಧ್ಯಕ್ಷೆಯಾಗಿ ಆಯ್ಕೆಗೊಂಡ ನಂತರ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅಧ್ಯಕ್ಷೆ ಕುಸುಮಾ ಸಣ್ಣಸ್ವಾಮಿ ಅವರು, ಅಧ್ಯಕ್ಷೆ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರೂ ಕೂಡ ಶಾಸಕರು ಕುರುಬ ಸಮುದಾಯಕ್ಕೆ ಅವಕಾಶ ನೀಡಿದ್ದಾರೆ ಎಂದರಲ್ಲದೇ, ತಮ್ಮ ಮೇಲೆ ವಿಶ್ವಾಸವಿರಿಸಿ ಅಧಿಕಾರ ನೀಡಿರುವ ಶಾಸಕರಾದ ಎಚ್.ಡಿ.ರೇವಣ್ಣ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಕೃತಜ್ಞತೆ
ಸಲ್ಲಿಸುವುದಾಗಿ ತಿಳಿಸಿದರು.
ನೂತನ ಅಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರು  ಹಾಲಿ ಸದಸ್ಯರಾದ  ಎನ್.ಆರ್.ಅನಂತಕುಮಾರ್, ಕೆ.ಎಂ.ಚಂದ್ರಮತಿ, ಪುಷ್ಪಾಗೌಡೇಗೌಡ, ಉಪಾಧ್ಯಕ್ಷರಾದ  ಡಿ.ಕೃಷ್ಣಪ್ಪ, ನಂಜುಂಡಪ್ಪ, ಭಾಗ್ಯವತಿ, ಸಿ.ಆರ್.ಮಂಜುನಾಥ್, ಲತಾ, ಹುಚ್ಚೇಗೌಡ, ತಾಪಂ ಕಾರ್ಯನಿರ್ವಹಣಾಧಿಕಾರಿ ತಮ್ಮಣ್ಣಗೌಡ ಮತ್ತಿತರರು ಉಪಸ್ಥಿತರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement