ಅಂಗನವಾಡಿ ಕಾರ್ಯಕರ್ತೆಯರಿಗೆ ಕಾರ್ಯಾಗಾರ
ನುಗ್ಗೇಹಳ್ಳಿ: ಚನ್ನರಾಯಪಟ್ಟಣ ತಾಲ್ಲೂಕು ನುಗ್ಗೇಹಳ್ಳಿ ಹೋಬಳಿ ಅಕ್ಕನಹಳ್ಳಿ ಕ್ರಾಸ್ನಲ್ಲಿ ಭಾನುವಾರ ನಡೆದ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮಹಿಳಾ ಸಂಘಗಳ ಸದಸ್ಯೆಯರಿಗೆ ನಡೆದ ಕಾನೂನು ಕಾರ್ಯಾಗಾರವನ್ನು ಜೆ ಎಂ ಎಫಫ್ಸಿ ಅಧಿಕ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಬಿ. ಹೊಸಮನಿ ಇತ್ತೀಚೆಗೆ ಉದ್ಘಾಟಿಸಿದರು. ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಯೋಜನಾಧಿಕಾರಿ ಸಿ.ಎನ್. ಗಂಗಪ್ಪಗೌಡ, ವಕೀಲರ ಸಂಘದ ಅಧ್ಯಕ್ಷ ವೈ.ಕೆ. ಪುಟ್ಟಸ್ವಾಮಿಗೌಡ, ವಕೀಲರ ಸಂಘದ ಕಾರ್ಯದರ್ಶಿ ಎಂ.ಆರ್. ನಿಂಗರಾಜು, ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಮಣತ್ಯುಂಜಯ, ವಕೀಲರಾದ ಚಂದ್ರಕಲಾ, ಸಿ.ಎಲ್. ಭಾಗ್ಯ, ಚಂದನಾ, ಎಲ್.ಆರ್.ಪುಷ್ಪ, ನೌಕರ ಎನ್.ಭಗವಾನ್, ನುಗ್ಗೇಹಳ್ಳಿ ಠಾಣಾ ಎಎಸ್ಐ ಪುಟ್ಟರಾಜು ಉಪಸ್ಥಿತರಿದ್ದರು.
ಮಕ್ಕಳ ಮಾನಸಿಕ ಬೆಳವಣಿಗೆಗೆ ಕ್ರೀಡೆ ಸ್ಫೂರ್ತಿಯಾಗಬೇಕು
ಹಾಸನ: ಕ್ರೀಡೆ ಎಂಬುದು ಮಕ್ಕಳ ಮಾನಸಿಕ ಸ್ಥೈರ್ಯ ಹಾಗೂ ಬೆಳವಣಿಗೆಗೆ ಸ್ಫೂರ್ತಿ ಆಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣಾಧಿಕಾರಿ ಈಶ್ವರಪ್ಪ ಹೇಳಿದ್ದಾರೆ. ನಗರದ ಅರವಿಂದ ಶಿಕ್ಷಣ ಸಂಸ್ಥೆಯಲ್ಲಿ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಎಷ್ಟು ಮುಖ್ಯವೋ ಕ್ರೀಡೆಯು ಅಷ್ಟೇ ಪ್ರಮುಖ ಪಾತ್ರವಹಿಸುತ್ತದೆ. ಕ್ರೀಡೆಯಲ್ಲಿ ಮಕ್ಕಳು ಭಾಗವಹಿಸುವುದರ ಮೂಲಕ ದೇಶ, ರಾಜ್ಯ ಹಾಗೂ ಶಾಲೆಗೆ ಕೀರ್ತಿ ತರಬೇಕು ಎಂದರು. ಕಾರ್ಯಕ್ರಮದಲ್ಲಿ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಗೋವಿಂದೇಗೌಡ, ಏಕಲವ್ಯ ಪ್ರಶಸ್ತಿ ವಿಜೇತ ಸಂತೋಷ್, ಅರವಿಂದ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಬಿ.ಕೆ. ರಂಗಸ್ವಾಮಿ, ಸುನೀತಾ ಪಾಲಾಕ್ಷ ಹಾಗೂ ಇತರರು ಪಾಲ್ಗೊಂಡಿದ್ದರು.
ನವೋದಯ ಸಂಸ್ಥೆ ಚುನಾವಣೆ ಫಲಿತಾಂಶ
ಚನ್ನರಾಯಪಟ್ಟಣ: ಪಟ್ಟಣದ ನವೋದಯ ಸ್ವಾತಂತ್ರ್ಯ ಪೂರ್ವ ವಿದ್ಯಾಸಂಸ್ಥೆಯ ಆಡಳಿತ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷರಾದ ಪಟೇಲ್ ಮಂಜುನಾಥ್ ಆಯ್ಕೆಯಾಗಿದ್ದು, ಆದಿಶೇಷಕುಮಾರ್ ಹೆಚ್ಚು ಮತಗಳನ್ನು ಪಡೆದು ನಿರ್ದೇಶಕ ಸ್ಥಾನಕ್ಕೆ ಪುನರಾಯ್ಕೆಗೊಂಡಿದ್ದಾರೆ. ಭಾನುವಾರ ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಸಂಜೆ ಪ್ರಕಟಗೊಂಡಿದ್ದು, ಆಡಳಿತ ಮಂಡಳಿಯ ನಿರ್ದೇಶಕರುಗಳ ಸ್ಥಾನಕ್ಕೆ 33 ಮಂದಿ ಸ್ಪರ್ಧಿಸಿದ್ದು, 13 ಮಂದಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರೊ. ಸಿದ್ದೇಗೌಡ ಪ್ರಕಟಿಸಿದ್ದಾರೆ. ಪಟೇಲ್ ಮಂಜುನಾಥ್ (921), ಆದಿಶೇಷಕುಮಾರ್ (1037), ಡಾ. ಶೇಷಶಯನ (1017), ಪ್ರಕಾಶ ಕೆಂಬಾಳು (970), ರವಿಶಂಕರ್ (813), ಕುಂಬಾರಹಳ್ಳಿ ರಮೇಶ್(753) ನವೀನ್(902), ಸಿ.ಟಿ. ಅಶೋಕ್ಕುಮಾರ್ (960), ಕೆ.ಜೆ. ಬಾಬು (766), ಒ.ಆರ್. ರಂಗೇಗೌಡ(856), ರೋಹಿತ್(786), ಚಿದಂಬರ್ (878), ಸುರೇಶ್(998) ಅವರು ಆಯ್ಕೆಯಾಗಿದ್ದಾರೆ. ಚುನಾವಣೆ ಪ್ರಕ್ರಿಯೆ ನಡೆದ ನಂತರ ಸಂಸ್ಥೆಯ ಅಧ್ಯಕ್ಷ ಜಯರಾಂ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಿತು.
ವಾಸು ಅವಿರೋಧ ಆಯ್ಕೆ
ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಕುಂಬೇನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಕೆ.ಸಿ. ವಾಸು ಅವಿರೋದ ಆಯ್ಕೆಯಾಗಿದ್ದಾರೆ. ಈ ಸಂಘಕ್ಕೆ ಕೆ.ಆರ್.ರಂಗಸ್ವಾಮಿ, ಕೆ.ಆರ್. ರವಿ, ಗಂಗಾಧರ, ಮಂಜೇಗೌಡ, ಜವರೇಗೌಡ, ಆಣ್ಣೇಗೌಡ, ನಂಜೇಗೌಡ, ಕಾಳಮ್ಮ, ಜಯಲಕ್ಷ್ಮಮ್ಮ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಡಿ.ಎ.ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ಜಿನ್ನೇನಹಳ್ಳಿ ಗ್ರಾಮ ಪಂಚಾಯ್ತಿ ಕಾರ್ಯ ನಿರ್ವಹಿಸಿದರು.