ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಂದು ಜಿಲ್ಲಾಮಟ್ಟದ ಯುವಜನ ಮೇಳ

Rashmi Kasaragodu
Updated On : 18 Feb 2014, 2:16 am

ಹಾಸನ: ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಫೆ. 18ರಂದು ಬೆಳಿಗ್ಗೆ 11ಕ್ಕೆ ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳದ ಉದ್ಘಾಟನಾ ಸಮಾರಂಭ ನಡೆಯಲಿದೆ.
ಮಾಜಿ ಪ್ರಧಾನಿ ಹಾಗೂ ಲೋಕಸಭಾ ಸದಸ್ಯ ಎಚ್.ಡಿ. ದೇವೇಗೌಡರು ಕಾರ್ಯಕ್ರಮದಲ್ಲಿ ಉಪಸ್ಥಿತಿ ವಹಿಸುವರು. ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಸಕ ಎಚ್.ಎಸ್. ಪ್ರಕಾಶ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಡಿ.ಜಿ. ಅಂಬಿಕಾ ರಾಮಣ್ಣ, ಶಾಸಕರು ಮತ್ತು ನಾನಾ ಗಣ್ಯರು ಸಭೆಯಲ್ಲಿ ಭಾಗವಹಿಸುವರು. ಈ ಕೆಳಕಂಡ ಸ್ಪರ್ಧೆಗಳನ್ನು ಯುವಕ ಮತ್ತು ಯುವತಿಯರಿಗಾಗಿ ಹಮ್ಮಿಕೊಳ್ಳಲಾಗಿದೆ.
ಯುವಕರಿಗೆ: ಭಾವಗೀತೆ- 3 ನಿಮಿಷ (ವೈಯುಕ್ತಿಕ), ಗೀಗಿಪದ - 3 ಜನಗಳು- 4 ನಿಮಿಷ, ಲಾವಣಿ - 4 ನಿಮಿಷ (ವೈಯುಕ್ತಿಕ), ಕೋಲಾಟ - 6 ನಿಮಿಷ, 12 ಮಂದಿ, ವೀರಗಾಸೆ - 12 ಜನ, 10 ನಿಮಿಷ, ರಂಗಗೀತೆ -3 ನಿಮಿಷ(ವೈಯುಕ್ತಿಕ), ಸಣ್ಣಾಟ -12 ಮಂದಿ, 30 ನಿಮಿಷಗಳು, ಯಕ್ಷಗಾನ - 15 ಮಂದಿ, 45 ನಿಮಿಷ, ಸೋಬಾನೆ ಪದ-(ಯುವತಿಯರಿಗೆ)4 ಮಂದಿ, 5 ನಿಮಿಷ, ಏಕಪಾತ್ರಾಭಿನಯ-(ವೈಯುಕ್ತಿಕ) 5 ನಿಮಿಷ,  ಚರ್ಮವಾದ್ಯ- 6 ಮಂದಿ, 10 ನಿಮಿಷ, ಜಾನಪದಗೀತೆ-6 ಮಂದಿ, 4 ನಿಮಿಷ, ಭಜನೆ ಗೀತೆ- 8 ಮಂದಿ 7 ನಿಮಿಷ, ಜನಪದ ನೃತ್ಯ- 10 ನಿಮಿಷ, 12 ಜನ ಭಾಗವಹಿಸುವುದು.                 
ಯುವತಿಯರಿಗೆ: ಭಾವಗೀತೆ - 3 ನಿಮಿಷ (ವೈಯುಕ್ತಿಕ), ಗೀಗಿಪದ - 5 ಜನ- 4 ನಿಮಿಷ, ಲಾವಣಿ - 4 ನಿಮಿಷ (ವೈಯುಕ್ತಿಕ), ಕೋಲಾಟ - 6 ನಿಮಿಷ, 12 ಮಂದಿ, ಜಾನಪದಗೀತೆ -6 ಮಂದಿ, 4 ನಿಮಿಷ, ಜಾನಪದನಣತ್ಯ- 10 ನಿಮಿಷ, 12 ಜನ,  ದೊಡ್ಡಾಟ - 15 ಮಂದಿ,45 ನಿಮಿಷ, ಭಜನೆ - 8 ಮಂದಿ 7 ನಿಮಿಷ, ಏಕಪಾತ್ರಾಭಿನಯ -(ವೈಯುಕ್ತಿಕ) 5 ನಿಮಿಷ, ರಾಗಿ-ಜೋಳ ಬೀಸುವ ಪದ (ಯಾವುದಾದರೂ  ಒಚಿದು) 2 ಮಂದಿ - 3 ನಿಮಿಷ, ರಂಗಗೀತೆ - 3 ನಿಮಿಷ (ವೈಯುಕ್ತಿಕ).
ಹೆಚ್ಚಿನ ವಿವರಗಳಿಗೆ 08172-246056ನ್ನು ಸಂಪರ್ಕಿಸಬಹುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement