ರೋಗಗಳು ಹರಡದಂತೆ ರಕ್ಷಿಸಬೇಕು: ಹುಚ್ಚೇಗೌಡ
ಅರಸೀಕೆರೆ: ಸಹಸ್ರಾರು ರು. ಕೊಟ್ಟು ಜಾನುವಾರುಗಳನ್ನು ಖರೀದಿಸಿದರೆ ಮಾತ್ರ ಸಾಲದು. ಅವುಗಳ ಆರೋಗ್ಯವನ್ನು ಕಾಪಾಡಲು ರೋಗ ರುಜಿನಗಳು ಬಾರದಂತೆ ಕಾಪಾಡಿಕೊಳ್ಳಲು ವೈದ್ಯರ ತಪಾಸಣೆ ಹಾಗೂ ರೋಗಗಳು ಹರಡದಂತೆ ಲಸಿಕೆ ಹಾಕಿಸಬೇಕೆಂದು ಜಿಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಹುಚ್ಚೇಗೌಡ ಸಲಹೆ ನೀಡಿದರು.
ಕ್ರಮವಹಿಸಿ: ತಾಲ್ಲೂಕಿನ ಗಂಡಸಿ ಹೋಬಳಿ ದಾಸೇನಹಳ್ಳಿ ಗ್ರಾಮದಲ್ಲಿ ಪಶು ಸಂಗೋಪನಾ ಇಲಾಖಾವತಿಯಿಂದ ಜಾನುವಾರುಗಳಿಗೆ ಉಚಿತ ಆರನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಜಾನುವಾರುಗಳ ಆರೋಗ್ಯವನ್ನು ಕಾಪಾಡುವುದು ಪ್ರತಿಯೊಬ್ಬ ರೈತನ ಜವಾಬ್ದಾರಿಯಾಗಿದೆ ಎಂದರು.
ಸಾಂಕೇತಿಕವಾಗಿ ಲಸಿಕೆ ವಿತರಿಸಿ ಮಾತನಾಡಿ, ಪಶು ವೈದ್ಯಾಧಿಕಾರಿ ಡಾ. ಮಧುಸೂದನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಶು ವೈದ್ಯಕೀಯ ಪರೀಕ್ಷಕಿ ಎಚ್.ಸಿ. ಧರಣಿ, ರವೀಶ್, ಲೋಲಾಕ್ಷಮ್ಮ, ಪುಟ್ಟಸ್ವಾಮಿ ಭಾಗವಹಿಸಿದ್ದರು.