ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವೈಭವದಿಂದ ಜರುಗಿದ ರಂಗನಾಥಸ್ವಾಮಿ ಜಾತ್ರೆ

Rashmi Kasaragodu
Updated On : 18 Feb 2014, 2:14 am

ಆಲೂರು: ತಾಲೂಕಿನ ಅಡಿಬೈಲು ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವವು ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು. ಪ್ರಥಮ ದಿನದಂದು ಪಾರ್ವತಮ್ಮನ ಜಾತ್ರೆ, ಎರಡನೇ ದಿನ ಬಿಂದಿಗೆಮ್ಮ ಹಾಗು ಕಡೇ ದಿನವಾದ ಭಾನುವಾರದಂದು ರಂಗನಾಥ ಸ್ವಾಮಿಯವರ ಜಾತ್ರೆ ಸಕಲ ಪೂಜಾ ಕಾರ್ಯಗಳೊಂದಿಗೆ ನಡೆಯಿತು. ಸುತ್ತಮುತ್ತಲ ಸುಮಾರು 50ಕ್ಕೂ  ಹೆಚ್ಚು ಹಳ್ಳಿಗಳ ಗ್ರಾಮಸ್ಥರು ಭಾಗವಹಿಸಿದ್ದರು. ಈ ಸಮಯದಲ್ಲಿ ಈ ಭಾಗದಲ್ಲಿ ನಡೆಯುತ್ತಿದ್ದ ಆನೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು  ಜಾತ್ರೆಗೆ ಬಂದ ಭಕ್ತಾದಿಗಳು ಮಾಗಡಿ ಹಳ್ಳಿಯಲ್ಲಿರುವ ಆನೆ ಕ್ಯಾಂಪ್ಗೆ ತೆರಳಿ ಸಾಕಾನೆಗಳನ್ನು ವೀಕ್ಷಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement