'ಸಂಘ ಸ್ಥಾಪಿಸಿದರೆ ಉದ್ದೇಶ ಸಾರ್ಥಕ ಆಗಲಾರದು'
ಹೊಳೆನರಸೀಪುರ: ಕೇವಲ ಸಂಘ ಸಂಸ್ಥೆಗಳನ್ನು ಸ್ಥಾಪಿಸಿದರಷ್ಟೇ ಅದರ ಉದ್ದೇಶ ಸಾರ್ಥಕವಾಗದು ಎಂದು ರೋಟರಿ ರಾಜ್ಯಪಾಲ ರೊ. ಗುರುರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು. ಇಲ್ಲಿನ ರೋಟರಿ ಸಂಸ್ಥೆಗೆ ಇತ್ತೀಚೆಗೆ ಅಧಿಕೃತ ಭೇಟಿ ನೀಡಿದ ನಂತರ ರೋಟರಿ ಬಾಲ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ರೋಟರಿ ಸಂಸ್ಥೆ ತನ್ನದೇ ಆದ ಶಕ್ತಿ ಸಾಮರ್ಥ್ಯ ಹೊಂದಿರುತ್ತದೆ. ಯಾವುದೇ ಸಮಾಜ ಸೇವೆಗೆ ತೊಡಗಿಸಿಕೊಳ್ಳದೆ ಇದ್ದರೆ ಅದಕ್ಕೆ ಸಂಘ- ಸಂಸ್ಥೆಗಳನ್ನು ಆರಂಭಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.