ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರಸೀಕೆರೆಯಲ್ಲಿ ಅಂಚೆ ನಾಕರರ ಪ್ರತಿಭಟನೆ

Rashmi Kasaragodu
Updated On : 19 Feb 2014, 1:10 am

ಅರಸೀಕೆರೆ: ಗ್ರಾಮೀಣ ಅಂಚೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಅಂಚೆ ಇಲಾಖೆ ಪೋಸ್ ಮಾಸ್ಟರ್ಗೆ ಮನವಿ ಸಲ್ಲಿಸಿದರು.
ಪಟ್ಟಣದ ಲಕ್ಷ್ಮೀಪುರದ ಗಣಪತಿ ದೇವಾಲಯದಿಂದ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದ ಗ್ರಾಮೀಣ ಅಂಚೆ ನೌಕರರು ಕೇಂದ್ರ ಸರ್ಕಾರದ ಘೋಷಣೆಗಳನ್ನು ಕೂಗುತ್ತಾ ಪ್ರಧಾನ ಅಂಚೆ ಕಚೇರಿಯ ಬಳಿ ಬಂದು ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ದಿನೇಶ್,  ಪೋಸ್ಟ್ ಮ್ಯಾನ್ ಹಾಗೂ ಎಂಟಿಎಸ್ಗಳ ಶೇ. 25ರಷ್ಟು ಹುದ್ದೆಯನ್ನು ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿ ಕೊಡುವುದು. ಹೊರಗುತ್ತಿಗೆ ಆಧಾರದ ಮೇಲೆ ಶೇ. 25ರಷ್ಟನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಜಿಡಿಎಸ್ ನೌಕರರನ್ನು ಸೇರಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ಗ್ರಾಮೀಣ ಅಂಚೆ ನೌಕರರ ಸಂಘಧ ಕಾರ್ಯದರ್ಶಿ ಹಾರನಹಳ್ಳಿ ಜಯಶಂಕರ್ ಮಾತನಾಡಿ, ಅನುಕಂಪದ ಆಧಾರದ ಮೇಲೆ ಶೇ.100ರಷ್ಟು ನೌಕರಿ ಸೌಲಭ್ಯ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರವಿ, ನಾರಾಯಣಸ್ವಾಮಿ, ಲೋಕೇಶ್, ರೇಣುಕಪ್ಪ ಇನ್ನಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement