ಉಚಿತ ವೈದ್ಯಕೀಯ ತಪಾಸಣೆ, ಔಷಧಿ ವಿತರಣೆ ಕಾರ್ಯಕ್ರಮ
ಹಾಸನ: ತಾಲೂಕಿನ ಕೌಶಿಕ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ತಂಡದ ವಿಶೇಷ ವಾರ್ಷಿಕ ಶಿಬಿರದ ಮೂರನೇ ದಿನದಂದು ಸಮೀಪದ ಕಂಚನಹಳ್ಳಿಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಉಚಿತ ಔಷಧಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರದಲ್ಲಿ ಒಟ್ಟು 60 ಆರೋಗ್ಯಾಕಾಂಕ್ಷಿಗಳಿಗೆ ಸುಮಾರು ಒಂದು ಸಾವಿರ ರು.ಗೂ ಅಧಿಕ ಬೆಲೆಯ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಸದ್ಬಳಕೆ ಬಗ್ಗೆ ತಿಳುವಳಿಕೆ: ಸಂಜೆ ನಡೆದ ಸಭೆಯಲ್ಲಿ ವರ್ತಕ ಮಾಂಗಿಲಾಲ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಲೀಲಾವತಿ, ಎನ್.ಡಿ.ಅರ್.ಕೆ ಕಾಲೇಜಿನ ಪ್ರಾಧ್ಯಾಪಕ ನೀಲಕಂಠ ಎನ್. ಮನ್ವಾಚಾರ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯಸಹ ಪ್ರಾಧ್ಯಾಪಕ ಡಾ. ಗೋವಿಂದ ಶರ್ಮ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಸಹ ಪ್ರಾಧ್ಯಾಪಕ ಡಾ. ಪ್ರತಿಭಾ ನಾರಾಯಣ ಪ್ರಕಾಶ್ ಇವರು ಶಿಬಿರದ ಮಹತ್ವ ಹಾಗೂ ಅದರ ಪ್ರಭಾವದ ಮುಂದಿನ ಜೀವನದಲ್ಲಿ ಸದ್ಬಳಕೆಯ ಬಗ್ಗೆ ತಿಳಿಸಿಕೊಟ್ಟರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ.ನಾರಾಯಣ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾರ್ಥಿ ಎಚ್.ಎನ್. ಚೈತ್ರ ಕಾರ್ಯಕ್ರಮ ನಡೆಸಿಕೊಟ್ಟರು, ಶ್ರೇಯಾ ಪ್ರಾರ್ಥಿಸಿದರು. ಶಿಬಿರಾಧಿಕಾರಿ ಮದನ್ ಕುಮಾರ್ ಸ್ವಾಗತ ಕೋರಿದರು