ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೌಶಿಕ ಗ್ರಾಮದಲ್ಲಿ ಸತ್ಸಂಗ ಕಾರ್ಯಕ್ರಮ

Rashmi Kasaragodu
Updated On : 19 Feb 2014, 1:09 am

ಹಾಸನ: ಜಿಲ್ಲೆಯ ಕೌಶಿಕ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ತಂಡವು ವಿಶೇಷ ವಾರ್ಷಿಕ ಶಿಬಿರದಡಿಯಲ್ಲಿ ಸತ್ಸಂಗ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮವನ್ನು ಅಶ್ವತ್ಥ ನಾರಾಯಣ ನಡೆಸಿಕೊಟ್ಟರು.
ಭಾರತೀಯ ಸಂಸ್ಕೃತಿ ಬಗ್ಗೆ ಮಾತನಾಡುತ್ತಾ, ಸನ್ನಡತೆಯ ಸಂಸ್ಕೃತಿಯ ಭದ್ರ ಬುನಾದಿ ಹಾಗು ಈ ಸಮನ್ವಯಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆ ಒಂದು ಉತ್ತಮ ಉದಾಹರಣೆ ಎಂಬುದನ್ನು ತಿಳಿಸಿಕೊಟ್ಟರು.
ಪಾಶ್ಚಾತ್ಯ ಚಿಕಿತ್ಸಾ ಪದ್ಧತಿಯ ಮೂಲ ಆಯುರ್ವೇದ ಹಾಗೂ ಭಾರತೀಯ ಸಂಸ್ಕೃತಿಯ ಉದಾತ್ತ ಮನೊಭಾವ ವಸುದೈವ ಕುಟುಂಬ ಎಂಬ ಮೂಲಮಂತ್ರದಲ್ಲಿ ಇದೆ ಎಂದು ತಿಳಿಸಿಕೊಟ್ಟರು.
ಮತ್ತೊಬ್ಬ ಅತಿಥಿ ಟಿ.ಎಸ್. ನಾಗರಾಜ್, ತಮ್ಮ ರಚನೆಗಳ ಮೂಲಕ ಶಿಬಿರಾರ್ಥಿಗಳ ಮನ ರಂಜಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಬಿರಾಧಿಕಾರಿ ಎಂ.ಎನ್.ಪಾಂಡುರಂಗ ಅವರು ನಡೆಸಿಕೊಟ್ಟರು. ಕಾರ್ಯಕ್ರಮನ್ನು ಶಿಬಿರಾರ್ಥಿ ಡಾ. ರಾಕೇಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement