ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ದೇಶದ ಅಭಿವೃದ್ಧಿ ಆಳುವ ನಾಯಕರ ಮೇಲೆ ಅವಲಂಬಿತ'

Rashmi Kasaragodu
Updated On : 19 Feb 2014, 1:11 am

ಹೊಳೆನರಸೀಪುರ: ಪ್ರತಿಯೊಂದು ದೇಶದ ಅಭಿವೃದ್ಧಿ ಆಯಾ ದೇಶಗಳನ್ನು ಆಳುವ ನಾಯಕರ ನಾಯಕತ್ವದ ಗುಣವನ್ನು ಆಧರಿಸಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ. ನಾಗೇಂದ್ರಬಾಬು ತಿಳಿಸಿದರು.
ತಾಲೂಕಿನ ಪಡುವಲಹಿಪ್ಪೆಯ ಹೆಚ್.ಡಿ. ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನೆಹರು ಯುವ ಕೇಂದ್ರ, ಶ್ರೀ ವೀರಭದ್ರೇಶ್ವರ ಯುವ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ಕುರಿತ ಮೂರು ದಿನಗಳ ತರಬೇತಿಯ 2ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಸ್ಥೆ ಅಭಿವೃದ್ಧಿಗೂ ನಾಯಕತ್ವ ಕಾರಣ: ಯಾವುದೇ ಉದ್ದಿಮೆ, ಸಂಸ್ಥೆ, ಸಂಘಟನೆ, ವ್ಯವಸ್ಥೆ ಅಥವಾ ದೇಶ ಅಭಿವೃದ್ಧಿ ಆಗಬೇಕಾದರೆ ಅದನ್ನು ಮುನ್ನಡೆಸುವ ನೇತಾರರು ಉತ್ತಮ ನಾಯಕತ್ವ ಗುಣಗಳನ್ನು ಹೊಂದಿರಬೇಕು. ಇದಕ್ಕೆ ಉದಾಹರಣೆಯಾಗಿ  ಧೀರೂಭಾಯಿ ಅಂಬಾನಿ, ಟಾಟಾ ಮುಂತಾದವರ ಸಂಸ್ಥೆಗಳ ಅಭಿವೃದ್ಧಿಗೆ ಅವರ ನಾಯಕತ್ವ ಕಾರಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಡಿ. ನಾರಾಯಣ ಮಾತನಾಡಿ, ನಾಯಕತ್ವ ಗುಣ ವಂಶ ಪಾರಂಪರ್ಯವಾಗಿ ಬರುವಂತಹುದಲ್ಲ. ವಿದ್ಯಾರ್ಥಿಗಳು ಸಮುದಾಯದ ಜೊತೆ ಬೆರೆಯುವುದರ ಮೂಲಕ, ಸಮಸ್ಯೆಗಳನ್ನು ಎದುರಿಸುವುದರ ಮೂಲಕ, ಇತರ ಮುಖ್ಯ ನಾಯಕರನ್ನು ಅನುಕರಿಸುವುದರ ಮೂಲಕ ಅವುಗಳನ್ನು ರೂಢಿಸಿಕೊಳ್ಳಬೇಕಾಗಿದೆ ಎಂದರು.
ಸಹಾಯಕ ಪ್ರಾಧ್ಯಾಪಕ ನಂದನ್, ಸಮಾಜಕಾರ್ಯ ಅಧ್ಯಯನ ವಿಭಾಗದ ಸಂಯೋಜಕ ಪಾರ್ಥೇಶ ಮತ್ತು ತಬ್ರೇಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement