ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಾಲಕ ತೇಜಸ್ನ ಜೀವ ಬಲಿ ಪಡೆದಿದ್ದ ಚಿರತೆ ಅಂತೂ ಬಿತ್ತು ಬೋನಿಗೆ

Rashmi Kasaragodu
Updated On : 19 Feb 2014, 1:11 am

ಹಾಸನ: ಬಾಲಕನನ್ನು ತಿಂದು ಹಾಕಿದ್ದ ನರಭಕ್ಷಕ ಹೆಣ್ಣು ಚಿರತೆ ಕೊನೆಗೆ ಅರಣ್ಯ ಇಲಾಖೆ ಇಟ್ಟಿದೆ ಬೋನಿಗೆ ಮಂಗಳವಾರ ಸೆರೆ ಸಿಕ್ಕಿದೆ.
ಆತಂಕ ಸೃಷ್ಟಿಸಿದ್ದ ಈ ಹೆಣ್ಣು ಚಿರತೆ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ತಾಲೂಕಿನ ಕಲ್ಲುಗುಡಗನಹಳ್ಳಿಯಲ್ಲಿ ಬಿದ್ದಿದ್ದು, ಕೆಲ ದಿನಗಳ ಹಿಂದಷ್ಟೇ ತಾಲೂಕಿನ ನಾಗನಹಳ್ಳಿಯಲ್ಲಿ ತೇಜಸ್ ಎಂಬ ಬಾಲಕನ್ನು ಹೊತ್ತೊಯ್ದು ತಿಂದು ಹಾಕಿತ್ತು. ನಂತರ ಈ ಹೆಣ್ಣು ಚಿರತೆ ಬೋನಿಗೆ ಬೀಳದೆ ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಯ ಉಂಟು ಮಾಡಿತ್ತು.
4ನೇ ಚಿರತೆ: ಮರಿ ಚಿರತೆಯೊಂದು ಕಳೆದ ವಾರ ಬೋನಿಗೆ ಬಿದ್ದ ಸಂದರ್ಭದಲ್ಲಿ ಈ ಹೆಣ್ಣು ಚಿರತೆ ಬೋನಿನ ಬತ್ತಿರ ಬಂದು ಹೋಗಿತ್ತು. ಆದರೆ ಬೋನಿಗೆ ಸೆರೆ ಸಿಕ್ಕಿರಲಿಲ್ಲ. ಜೊತೆಗೆ ಬೋನಿನ ಹತ್ತಿರ ಯಾರೂ ಸುಳಿಯದಂತೆ ಪ್ರತಿರೋಧ ವ್ಯಕ್ತಪಡಿಸಿತ್ತು. ಆದು ಕೊನೆಗೆ ಸೆರೆ ಸಿಕ್ಕಿದೆ. ಈ ಚಿರತೆ ಸೆರೆ ಸಿಕ್ಕುವ ಮೂಲಕ ಇದು ನಾಲ್ಕನೇ ಚಿರತೆಯಾಗಿದ್ದು, ಈ ಭಾಗದಲ್ಲಿ ಮತ್ತಷ್ಟು ಚಿರತೆಗಳು ಇವೆ ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ.
ವಾಗ್ವಾದ: ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಹೆಣ್ಣು ಚಿರತೆ ಬಿದ್ದಿದ್ದು, ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳಿಗೆ ಚಿರತೆಯನ್ನು ಸಾಗಿಸಲು ಬಿಡದೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಈ ಭಾಗದಲ್ಲಿ ಇರುವ ಎಲ್ಲಾ ಚಿರತೆಗಳನ್ನು ಸೆರೆ ಹಿಡಿಯುವವರೆಗೂ ನಾವು ಇಲ್ಲಿಂದ ಈ ಚಿರತೆಯನ್ನು ಸಾಗಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ನಡುವೆ ಕೆಲ ಸಮಯ ವಾಗ್ವಾದ ನಡೆಯಿತು.
ಮನೆಯಿಂದ ಹೊರಗೆ ಕಾಲಿಡಲೂ ಗ್ರಾಮಸ್ಥರು ಭಯಪಡುತ್ತಿದ್ದು, ಈ ಪ್ರದೇಶದಲ್ಲಿರುವ ಎಲ್ಲಾ ಚಿರತೆಗಳನ್ನೂ ಹಿಡಿಯಬೇಕೆಂದು ಗ್ರಾಮಸ್ಥರು ಪಟ್ಟುಹಿಡಿದರು.  ಉಳಿದ ಚಿರತೆಗಳನ್ನೂ ಹಿಡಿಯುವುದಾಗಿ ಅರಣ್ಯಾಧಿಕಾರಿಗಳು ಭರವಸೆ ನೀಡಿದ ನಂತರ ಬಿಗುವಿನ ವಾತಾವರಣ ತಿಳಿಗೊಂಡಿತು.




ಚಿರತೆ ಹಾವಳಿ ಈ ಭಾಗದಲ್ಲಿ ಹೆಚ್ಚಾಗಿದ್ದು, ಗ್ರಾಮಸ್ಥರು ಜಮೀನಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಭಾಗದಲ್ಲಿ ಇರುವ ಎಲ್ಲಾ ಚಿರತೆಗಳನ್ನು ಹಿಡಿದು ಗ್ರಾಮಸ್ಥರಲ್ಲಿ ಇರುವ ಜೀವ ಭಯ ಹೋಗಲಾಡಿಸಬೇಕು.
ಟಿ  ಧರಣೇಶ್, ಕಲ್ಲುಗುಡಗನಹಳ್ಳಿ ಗ್ರಾಮಸ್ಥ


ಚಿರತೆ ಹಾವಳಿ ಈ ಭಾಗದಲ್ಲಿ ಹೆಚ್ಚಾಗಿದ್ದು, ಗ್ರಾಮಸ್ಥರು ಜಮೀನಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಭಾಗದಲ್ಲಿ ಇರುವ ಎಲ್ಲಾ ಚಿರತೆಗಳನ್ನು ಹಿಡಿದು ಗ್ರಾಮಸ್ಥರಲ್ಲಿ ಇರುವ ಜೀವ ಭಯ ಹೋಗಲಾಡಿಸಬೇಕು.
ಟಿ  ಧರಣೇಶ್, ಕಲ್ಲುಗುಡಗನಹಳ್ಳಿ ಗ್ರಾಮಸ್ಥ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement