ಬಾಲಕಿಯರ ಕಾಲೇಜಿನಲ್ಲಿ ಸರಸ್ವತಿ ಪೂಜೆ
ರಾಮನಾಥಪುರ: ನಮಗೆ ಶೈಕ್ಷಣಿಕ, ಕ್ರೀಡೆಗಳ ಜೊತಗೆ ನಮ್ಮ ನಾಡು, ನುಡಿ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ನಮ್ಮ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಪಾಠ ಪ್ರವಚನ ಹೆಚ್ಚಿನ ರೀತಿ ಪೋತ್ಸಾಹ ನೀಡುತ್ತಿರುವುದರಿಂದ ವಿದ್ಯಾಭ್ಯಾಸದಲ್ಲಿ ನಮಗೆ ಮುಂದೆ ಬರಲು ಸಹಕಾರಿಯಾಯಿತು ಎಂದು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಾನಸ ಹೇಳಿದರು.
ಇಲ್ಲಿಯ ಬಸವೇಶ್ವರ ವೃತ್ತದಲ್ಲಿರುವ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಾದ ನಾವು ಪ್ರಕೃತಿಯನ್ನು ಅರಾಧಿಸಬೇಕು. ನಮ್ಮ ಸಂಸ್ಕೃತಿಯನ್ನು ಪೂಜಿಸಬೇಕು.
ಗುರು ಹಿರಿಯರು ಹಾಗೂ ಪೋಷಕರನ್ನು ಗೌರವದಿಂದ ಕಂಡು ಅವರ ಗುಣವನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ನಮ್ಮ ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡರೆ ನಿಜವಾದ ಶಿಕ್ಷಣ ಪಡೆದುಕೊಂಡಂತೆ ಎಂದು ಮಾನಸ ಹೇಳಿದರು.
ಇವರೊಂದಿಗೆ ಹೇಮಲತಾ, ರಮ್ಮ, ಕೆ.ಪಿ. ಶಿಲ್ಪ, ಎಂ. ನವ್ಯಶ್ರೀ, ಅರ್.ಅರ್. ಪೂಜಾ, ಡಿ.ಎಸ್. ಹೇಮ, ತುಳಸಿ, ಮಾಲತಿ ಮುಂತಾದವರು ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಕಾಲೇಜು ಪ್ರಾಂಶುಪಾಲ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಎಂ.ಎಸ್. ಕವಿತ ಉದ್ಘಾಟಿಸಿದರು.
ಕಾಲೇಜು ಸಮಿತಿ ನಿರ್ದೇಶಕ ಶಿರದನಹಳ್ಳಿ ಕೃಷ್ಣೇಗೌಡ ಪತ್ರಕರ್ತ ದೇವಕಿ ಚಂದ್ರಶೇಖರ್, ಉಪನ್ಯಾಸಕರಾದ ಉಮಾಪತಿ, ಡೆಲ್ವಿಕುಮಾರ್ ಎಂ.ಸಿ. ಜಯದೇವ್, ಐ.ಡಿ. ಸ್ವಾಮಿ, ಕೃಷ್ಣಗೌಡ, ನಟರಾಜ್, ಧರ್ಮ, ಕೃಷ್ಣ, ಪ್ರಸಾದ್, ಮಂಜುನಾಥ್, ಶಾಂಭವಿ, ಶಾಮಲ, ಲಕ್ಷ್ಮಿ ಅವರು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿನಿಗಳಾದ ಕಾವ್ಯಶ್ರೀ ಹಾಗೂ ಮೋಹನೇಶ್ವರಿ ಪ್ರಾರ್ಥಿಸಿದರು. ಬಿ.ಎಂ. ಪಾರ್ವತಿ ಸ್ವಾಗತಿಸಿ, ಅಮೂಲ್ಯ ಹಾಗೂ ಕೆ.ಬಿ. ಗೀತಶ್ರೀ ನಿರೂಪಿಸಿ, ಎಸ್.ಕೆ. ಪವಿತ್ರ ವಂದಿಸಿದರು.