ಸಾಮೂಹಿಕ ಲಸಿಕೆ ಆಂದೋಲನ
ಹಾಸನ: ಕೇಂದ್ರ ಪುರಸ್ಕತ ಕಾಲು ಮತ್ತು ಬಾಯಿ ಜ್ವರ ರೋಗ ನಿಯಂತ್ರಣ ಯೋಜನೆಯಡಿ ಮಾ. 14ರವರೆಗೆ ಜಿಲ್ಲೆಯಾದ್ಯಾಂತ ಜಾನುವಾರುಗಳಿಗೆ ಕಾಲು ಮತ್ತು ಬಾಯಿ ಜ್ವರ ರೋಗದ ವಿರುದ್ಧ ರೋಗ ನಿರೋಧಕ ಲಸಿಕೆ ಹಾಕುವ ಸಾಮೂಹಿಕ ಲಸಿಕೆ ಆಂದೋಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ಜಾನುವಾರುಗಳ ಮಾಲೀಕರು, ಹೈನುರಾಸು ಸಾಕಾಣಿಕೆದಾರರು, ರೈತ ಭಾಂಧವರು, ಸಾರ್ವಜನಿಕ ಬಂಧುಗಳು ತಮ್ಮ ಜಾನುವಾರುಗಳಿಗೆ ಕಾಲು ಮತ್ತು ಬಾಯಿ ಜ್ವರ ರೋಗ ನಿರೋಧಕ ಲಸಿಕೆಯನ್ನು ಉಚಿತವಾಗಿ ಹಾಕಿಸಿಕೊಳ್ಳುವ ಮೂಲಕ ತಮ್ಮ ಜಾನುವಾರುಗಳನ್ನು ಕಾಲು ಮತ್ತು ಬಾಯಿ ಜ್ವರ ರೋಗದಿಂದ ಸಂರಕ್ಷಿಸಿಕೊಳ್ಳಬೇಕೆಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ದೊಡ್ಡರೋಗ ನಿವಾರಣಾ ಯೋಜನೆಯ ಉಪನಿರ್ದೇಶಕ ಡಾ.ಪಿ. ಶ್ರೀನಿವಾಸ್ ಕೋರಿದ್ದಾರೆ.