ಅಧ್ಯಕ್ಷರಾಗಿ ರವಿಕುಮಾರ್ ಆಯ್ಕೆ
ಹಿರೀಸಾವೆ: ಹೋಬಳಿಯ ದಿಡಗ ತುಮಕೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಎಲ್. ರವಿಕುಮಾರ್ ಐದನೇ ಬಾರಿ ಅವಿರೋಧ ಆಯ್ಕೆ ಯಾಗಿದ್ದಾರೆ. ನಿರ್ದೇಶಕರಾಗಿ ಟಿ.ಆರ್. ಸತೀಶ್, ಟಿ.ಜೆ.ಹರೀಶ್, ಟಿ.ಎನ್. ಬಸವರಾಜು, ಟಿ.ಎಸ್. ಲಕ್ಷ್ಮೇಗೌಡ, ಕಣತೂರಮ್ಮಾರ ಹರೀಶ್, ಚನ್ನಿಂಗೇಗೌಡ, ರಾಮಶೆಟ್ಟಿ, ರತ್ನಮ್ಮ, ಪಾರ್ವತಮ್ಮ, ಆಯ್ಕೆಯಾದರು. ಟಿ.ಜೆ. ಕುಮಾರ್, ಕಾರ್ಯದರ್ಶಿಯಾಗಿ ಹಾಗೂ ಮಂಜುನಾಥ, ಹಾಲು ಪರೀಕ್ಷಕರಾಗಿ ಮುಂದುವರಿದಿದ್ದಾರೆ.