ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮುಂದುವರಿದ ಅಂಚೆ ನೌಕರರ ಮುಷ್ಕರ

Rashmi Kasaragodu
Updated On : 20 Feb 2014, 2:12 am

ಹಾಸನ: ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆನೌಕರರ ಸಂಘದವರು ಕೈಗೊಂಡಿರುವ ಮುಷ್ಕರ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಪ್ರತಿಭಟನಾಕಾರರು ನಗರದಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಅವರಿಗೆ ಮನವಿ ನೀಡಿದರು.
ವಿವಿಧ ಬೇಡಿಕೆಗಳು: ಜಿಡಿಎಸ್ ನೌಕರರನ್ನು ಪೌರ ನೌಕರ ಎಂದು ಪರಿಗಣಿಸಿ, ಇಲಾಖೆಯ ನೌಕರರಿಗೆ ನೀಡುವಂತಹ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಡಬೇಕು. ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕು. ಅನುಕಂಪದ ಆಧಾರದ ನೌಕರಿಯ ಸೌಲಭ್ಯವನ್ನು ಶೇ.100ರಷ್ಟು ಕೊಡಬೇಕು. ಪೋಸ್ ಮತ್ತು ಎಂಟಿಎಸ್ಗಳ ಶೇ. 25ರಷ್ಟು ಹುದ್ದೆಗಳಲ್ಲಿ ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿಯನ್ನು ಕೊಡಬೇಕು.
ಹೊರಗುತ್ತಿಗೆ ಆಧಾರದ ಮೇಲೆ ಶೇ. 25ರಷ್ಟು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಜಿಡಿಎಸ್ ನೌಕರರನ್ನು ತುಂಬಬೇಕು. ಶೇ. 50ರಷ್ಟು ಡಿಎ ಮರ್ಜರ್ ಮಾಡಬೇಕು. ಜ.1,2006ರಿಂದ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ದಿನಗೂಲಿ, ಕಾಂಟಿಜೆಂಟಿ ಪಾರ್ಟ್ ಟೈಂ ನೌಕರರಿಗೆ ಡಿಎ ಕೊಡಬೇಕು ಎಂದು ಒತ್ತಾಯಿಸಿದ ಅವರು, ಬೇಡಿಕೆಗಳನ್ನು ಈಡೇರಿವವರೆಗೆ ಮುಷ್ಕರ ಹಿಂಪಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಕೆ.ಜೆ. ಶಿವಾಜಿ, ಅಧ್ಯಕ್ಷ ಜಿ.ಬಿ. ಕಾಳಿಂಗೇಗೌಡ,  ಡಿ.ಪಿ. ಶಂಕರಪ್ಪ, ಮಲ್ಲೇಶ್, ದೇವರಾಜು, ಸತೀಶ್, ವಸುಂಧರ್, ಶಿವಣ್ಣ, ಮಂಜುನಾತ್, ಕೇಶವೇಗೌಡ, ಎಚ್.ಪಿ. ಪರ್ವತೇಗೌಡ, ಲಕ್ಷ್ಮೀನರಸಿಂಹ, ಶಿವಕುಮಾರ್, ಶ್ರೀನಿವಾಸ್, ಧನಂಜಯ್, ಜಯಣ್ಣ, ಕೃಷ್ಣಪ್ಪ, ಜಯಕುಮಾರ್, ದೇವರಾಜ್, ದಿನೇಶ್, ಕೆಂಚಯ್ಯ, ಮಧು, ಗೀತಾ, ಚಂದ್ರಶೇಖರ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement