ರಾಜಿನಾಮೆಗೆ ಸಿದ್ಧನಿದ್ದೇನೆ'
ಸಕಲೇಶಪುರ: ಪಕ್ಷದ ಮುಖಂಡರು ಆದೇಶ ನೀಡಿದರೆ ಪುರಸಭ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲು ಸಿದ್ಧ ಎಂದು ಪುರಸಭೆ ಅಧ್ಯಕ್ಷ ಎಸ್.ಎನ್. ಸತೀಶ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಧ್ಯಕ್ಷ ಸ್ಥಾನ ಅಲಂಕರಿಸಿದ ನಂತರ ನಡೆದ 3 ಕೋಟಿ ರು. ಅಭಿವೃದ್ಧಿ ಕೆಲಸದಲ್ಲಿ ಪಾರದರ್ಶಕತೆ ಕಾಯ್ದುಕೊಂಡಿರುವುದು ಹಾಗೂ ಜಾತ್ರಾ ಟೆಂಡರ್ ಹಣ ದುರುಪಯೋಗವಾಗುವುದನ್ನು ತಪ್ಪಿಸಿದ್ದ ಹಿನ್ನೆಲೆಯಲ್ಲಿ ಕೆಲವು ಪುರಸಭೆ ಸದಸ್ಯರು ಅಸಮಾಧಾನಗೊಂಡಿದ್ದರೆ, ಇವರೊಂದಿಗೆ ಅಧ್ಯಕ್ಷಸ್ಥಾನ ಆಕಾಂಕ್ಷಿಗಳು ಕೈಜೋಡಿಸಿರುವ ಹಿನ್ನೆಲೆಯಲ್ಲಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಷಡ್ಯಂತ್ರ ನಡೆಸಲಾಗುತ್ತಿದೆ ಎಂದರು.
ವಿನಕಾರಣ ನಮ್ಮ ಪಕ್ಷದ ಸದಸ್ಯರೇ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದರು. ನನ್ನ ಬಗ್ಗೆ ಅಸಮಾಧಾನವಿದ್ದರೆ ಪಕ್ಷದ ಆಂತರಿಕ ಸಭೆಯಲ್ಲಿ ಮುಖಂಡರೊಂದಿಗೆ ಚರ್ಚಿಸಲಿ ಎಂದರು.