ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಗೆ # 4 ಕೋಟಿ ಲಾಭ
ನುಗ್ಗೇಹಳ್ಳಿ: ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಈ ವರ್ಷ 4 ಕೋಟಿ ರು. ಲಾಭಗಳಿಸಿ 20 ಕೋಟಿ ರು. ಠೇವಣಿ ಇಡಲಾಗಿದೆ ಎಂದು ಕಾರ್ಖಾನೆ ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ಇಲ್ಲಿಯ ಸಮೀಪದ ಬಾಗೂರು ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಇತ್ತೀಚೆಗೆ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಬಾಗೂರು ಹೋಬಳಿ 1480 ಷೇರುದಾರರಿಗೆ ತಲಾ 25 ಕೆಜಿ ಸಕ್ಕರೆ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವರ್ಷ ಕಾರ್ಖಾನೆಯ ಪೆಟ್ರೋಲ್ ಬಂಕ್ನಿಂದ 90 ಸಾವಿರ ಆದಾಯ ಬಂದಿದೆ. ಕಾರ್ಖಾನೆಯ 30ಎಕರೆ ವಿಸ್ತೀರ್ಣದಲ್ಲಿ ಇರುವ ತ್ಯಾಗದ ಮರಗಳ ಅಭಿವೃದ್ಧಿಗೆ 5 ಲಕ್ಷ ಷೇರುದಾರರ ಅನುಕೂಲಕ್ಕೆ 5ಕೋಟಿ ವೆಚ್ಚದ ಸಮೂದಾಯ ಭವನ ಮಾಡಿಸುವ ಉದ್ದೇಶವಿದೆ ಎಂದರು. ಸಮಾರಂಭದಲ್ಲಿ ಜಿಪಂ ಸದಸ್ಯ ಶಿವಶಂಕರ್ ಕುಂಟೆ, ಎಪಿಎಂಸಿ ನಿರ್ದೇಶಕ ಬಿ.ಎಚ್. ಶಿವಣ್ಣ, ಸುಬ್ಬೇಗೌಡ, ಕೃಷಿ ಪತ್ತಿನ ಕಾರ್ಯ ನಿರ್ವಹಣಾಧಿಕಾರಿ ಆನಂದ್ ಇದ್ದರು.