ಔಷಧಿ ವಿತರಣೆ
ಹಾಸನ: ತಾಲೂಕಿನ ಕೌಶಿಕ ಗ್ರಾಮದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ತಂಡದ ವಿಶೇಷ ವಾರ್ಷಿಕ ಶಿಬಿರದ ನಾಲ್ಕನೆ ದಿನ ಸಮೀಪದ ಸಾವಂತನಹಳ್ಳಿ, ಮತ್ತು ಚಿಗಳ್ಳಿಹಳ್ಳಿಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಔಷಧಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ಎರಡೂವರೆ ಸಾವಿರಕ್ಕು ಅಧಿಕ ಬೆಲೆಯ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು. ಶಿಬಿರದಲ್ಲಿ ಮಧ್ಯಾಹ್ನ ನಡೆದ ಸತ್ಸಂಗವನ್ನು ಜನಾರ್ದನ ಬೈಕಾಡಿ ನಡೆಸಿಕೊಟ್ಟರು. ಭಾಷಣ ಮಾಡುವ ಕಲೆ ಬಗ್ಗೆ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಭಾಷಾ ಸಂವಹನಕ್ಕೆ ಇರುವ ಮಹತ್ವ ಹಾಗೂ ಅದನ್ನು ಕರಗತ ಮಾಡಿಕೊಳ್ಳುವ ಬಗೆ ಹೇಗೆ ಎಂಬುದನ್ನು ತಿಳಿಸಿಕೊಟ್ಟರು.