ತಾಲೂಕು ಅಧ್ಯಕ್ಷರಾಗಿ ಬಿ.ಆರ್. ರವಿಶಂಕರ್
ಹೊಳೆನರಸೀಪುರ: ವಿಶ್ವ ವೀರಶೈವ ಅಕಾಡೆಮಿಯ ತಾಲೂಕು ಘಟಕ ರಚಿಸಲಾಯಿತು. ಘಟಕದ ಅಧ್ಯಕ್ಷರಾಗಿ ಬಿ.ಆರ್.ರವಿಶಂಕರ್, ಗೌರವಾಧ್ಯಕ್ಷರಾಗಿ ಮಲ್ಲಿಕಾರ್ಜುನಸ್ವಾಮಿ ಆಯ್ಕೆಯಾದರು. ಅಕಾಡೆಮಿಯ ಉಪಾಧ್ಯಕ್ಷರಾಗಿ ಕೆ.ಜೆ.ಮಹೇಶ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎನ್.ದಿನೇಶ್, ಸಂಘಟನಾ ಕಾರ್ಯದರ್ಶಿಯಾಗಿ ಎಚ್.ವಿ.ಅರುಣ್, ಪತ್ರಿಕಾ ಕಾರ್ಯದರ್ಶಿ ವಸಂತ್, ಕಚೇರಿ ಕಾರ್ಯದರ್ಶಿ ಎಲೆಚಾಗಹಳ್ಳಿ ಶಿವಶಂಕರ್, ನಿರ್ದೇಶಕರಾಗಿ ಬಿ.ಆರ್.ಚಂದ್ರಶೇಖರ್, ಗೌರವ ಸಲಹೆಗಾರರಾಗಿ ಮಲ್ಲೇಶಪುರ ಶಿವನಂಜಪ್ಪ, ಬಾಗೀವಾಳು ಬಸವರಾಜು, ಕುಪ್ಪೆ ಕೆ.ಸಿ.ಜಯಲಿಂಗಪ್ಪ, ಕೋಶಾಧ್ಯಕ್ಷರಾಗಿ ಮಹದೇವಪ್ಪ, ಸಂಚಾಲಕ ಬೀಚೇನಹಳ್ಳಿ ಮೋಹನ್ ಆಯ್ಕೆಗೊಂಡರು.