ಬಜೆಟ್ ಪೂರ್ವಭಾವಿ ಸಭೆ 5 ನಿಮಿಷದಲ್ಲಿ ಮುಕ್ತಾಯ
ಸಕಲೇಶಪುರ: ಪುರಸಭೆಯ ಬಜೆಟ್ ಪೂರ್ವಭಾವಿ ಸಭೆ ಯಾವುದೇ ಚರ್ಚೆಯಿಲ್ಲದೆ ಕೇವಲ 5 ನಿಮಿಷದಲ್ಲಿ ಮುಕ್ತಾಯಗೊಂಡಿತು. ಪುರಸಭೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಹುತೇಕ ಸದಸ್ಯರ ಗೈರು ಹಾಜರಿಯಾಗಿದ್ದು, ಯಾವುದೇ ಚರ್ಚೆಯಾಗದೆ ಮುಕ್ತಾಯಗೊಂಡಿತು. ಸಭೆಗೆ ಸಾರ್ವಜನಿಕರನ್ನು ಆಹ್ವಾನಿಸಲಾಗಿತ್ತಾದರೂ ಯಾರೂ ಭಾಗವಹಿಸಿರಲಿಲ್ಲ. ಜೆಡಿಎಸ್ನ 12 ಸದಸ್ಯರು ಗೈರು ಹಾಜರಾಗುವ ಮೂಲಕ ಅಧ್ಯಕ್ಷರ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದರು. 11.55 ಕ್ಕೆ ಆರಂಭವಾದ ಸಭೆ ಕೇವಲ 5 ನಿಮಿಷದಲ್ಲಿ ಮುಕ್ತಾಯವಾಯಿತು. ಈ ತಿಂಗಳ 24 ರಂದು ಬಜೆಟ್ ಮಂಡಿಸಲಾಗುವುದು ಎಂದು ಪುರಸಭಾ ಅಧ್ಯಕ್ಷ ಎಸ್.ಎನ್. ಸತೀಶ್ ತಿಳಿಸಿದರು.