ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅತಿ ಹೆಚ್ಚು ರಸಗೊಬ್ಬರ ಮಾರಾಟ: ಇಫ್ಕೋ ಸಾಧನೆ

Rashmi Kasaragodu
Updated On : 22 Feb 2014, 1:32 am

ಹಾಸನ: ರೈತರಿಗೆ ಅನುಕೂಲವಾಗುವಂತೆ ವ್ಯವಸಾಯೋತ್ಪನ್ನಗಳಿಗೆ ರಸಗೊಬ್ಬರಗಳನ್ನು ಅತಿ  ಹೆಚ್ಚು ಪ್ರಮಾಣದಲ್ಲಿ ಮಾರಾಟ ಮಾಡಿ ರಾಷ್ಟ್ರದಲ್ಲಿಯೇ ದೊಡ್ಡ ಸಂಸ್ಥೆಯಾಗಿ ಇಫ್ಕೋ ಕೆಲಸ ನಿರ್ವಹಿಸುತ್ತಿದೆ ಎಂದು ರಾಜ್ಯ ಸಹಕಾರ  ಮಹಾಮಂಡಳದ ನಿರ್ದೇಶಕ ಆರ್.ಟಿ. ದ್ಯಾವೇಗೌಡ ತಿಳಿಸಿದ್ದಾರೆ.
ಚನ್ನರಾಯಪಟ್ಟಣ ಮತ್ತು ಅರಸೀಕೆರೆ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ  ಸಂಘಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಇತ್ತೀಚೆಗೆ ಏರ್ಪಡಿಸಿದ್ದ ತರಬೇತಿ  ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಇಫ್ಕೋ ಸಂಸ್ಥೆಯ ಹಿರಿಯ  ಕ್ಷೇತ್ರೀಯ ವ್ಯವಸ್ಥಾಪಕ ಹೆಚ್.ಕೆ. ರಮಾನಂದ ಮಾತನಾಡಿ, ಇಫ್ಕೋ- ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ಸ್ ಸಂಸ್ಥೆಯು ಸಾಧನೆ ಭಾರತದ ಸಹಕಾರಿ ರಂಗದಲ್ಲಿ ಅದ್ವಿತೀಯವಾಗಿದೆ. 1967ರಲ್ಲಿ ಕೇವಲ 57 ಸಹಕಾರ ಸಂಘಗಳ ಸದಸ್ಯತ್ವದಿಂದ 6 ಲಕ್ಷ ರು. ಷೇರು ಬಂಡವಾಳದೊಂದಿಗೆ  ಪ್ರಾರಂಭಗೊಂಡ ಸಂಸ್ಥೆ ಈಗ 39,862 ಸಹಕಾರ ಸಂಘಗಳ ಸದಸ್ಯತ್ವದಿಂದ 426 ಕೋಟಿ ರು. ಷೇರು ಬಂಡವಾಳ ಹೊಂದಿದೆ ಎಂದರು. ಸಮತೋಲನ ಗೊಬ್ಬರ ಬಳಕೆ, ಬೆಳೆ ವಿಚಾರಗೋಷ್ಠಿಗಳು, ಮಣ್ಣಿನ ಆರೋಗ್ಯ ಮತ್ತು   ಬೆಳೆಯ ಉತ್ಪಾದನೆಗಾಗಿ ರಸಗೊಬ್ಬರಗಳ ಬಳಕೆಗಳನ್ನು ತಿಳಿಸಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement