ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗೌಡರ ಶಕ್ತಿ ಅರಿಯದ ಕಾಂಗ್ರೆಸ್: ಅಣ್ಣಪ್ಪಶೆಟ್ಟಿ ಟೀಕೆ

Rashmi Kasaragodu
Updated On : 22 Feb 2014, 1:28 am

ಹಾಸನ: ಜಿಲ್ಲಾ ಕಾಂಗ್ರೆಸ್ ಮುಖಂಡರು ವಿನಾಕಾರಣ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದು, ಅವರಿಗೆ ಗೌಡರ ಶಕ್ತಿ ಏನೆಂಬುದು ಗೊತ್ತಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಹೆಚ್. ಅಣ್ಣಪ್ಪಶೆಟ್ಟಿ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುವಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪಾತ್ರ ಹೆಚ್ಚಿನದು ಎಂದು ರಾಜ್ಯಮಟ್ಟದ ವಿಪಕ್ಷೀಯ ಮುಖಂಡರೇ ಒಪ್ಪಿಕೊಂಡಿದ್ದರೂ, ಜಿಲ್ಲಾಮಟ್ಟದ ಕಾಂಗ್ರೆಸ್ ಮುಖಂಡರು ದೇವೇಗೌಡ ಅವರನ್ನು ಟೀಕೆ ಮಾಡಿ ತಮ್ಮ  ಬಾಯಿ ಚಪಲ ತೀರಿಸಿಕೊಳ್ಳುತ್ತಿ ದ್ದಾರೆಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿದ್ದಾರೆ: ಯಾರ ಬಗ್ಗೆ ಯಾದರೂ ಟೀಕೆ ಮಾಡುವಾಗ ಅದು ಸಕರಾತ್ಮಕವಾಗಿರಬೇಕು ಎಂದ ಅವರು, ರಾಜಕೀಯ ದುರುದ್ದೇಶದಿಂದ ಹೆಚ್.ಡಿ. ದೇವೇಗೌಡ ಅವರನ್ನು ದೂರುವುದರಿಂದ ಯಾರೂ ನಾಯಕರಾಗಲು ಸಾಧ್ಯವಿಲ್ಲ. ದೇವೇಗೌಡರು ಕೆಲಸ ಮಾಡಿ ನಾಯಕರಾದರು. ಕಾಂಗ್ರೆಸ್‌ನವರು ಕೇವಲ ಟೀಕೆ ಮಾಡುವುದರಿಂದ ಮಾತ್ರ ನಾಯಕರಾಗಬಹುದು ಎಂಬ ಭ್ರಮೆಯಲ್ಲಿದ್ದಾರೆ ಎಂದರು.
ತಾಕತ್ತು ಸಾಬೀತಾಗಲಿದೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್.ಡಿ. ದೇವೇಗೌಡ ಸ್ಪರ್ಧಿಸಿದರೆ, ಅವರ ಗೆಲುವು ನಿಶ್ಚಿತ. ಟೀಕಾಕಾರರು ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಹಿಂದುಳಿದ ವರ್ಗಗಳಿಗೆ  ರಾಜಕೀಯ ಶಕ್ತಿ ನೀಡಿರುವ ಹೆಗ್ಗಳಿಕೆ ಹೊಂದಿರುವ ಹೆಚ್.ಡಿ. ದೇವೇಗೌಡರ ರಾಜಕೀಯ  ಮತ್ತು ಅವರು ಸಂಪಾದಿಸಿರುವ ಜನಶಕ್ತಿ ಏನೆಂಬುದು ಚುನಾವಣೆಯಲ್ಲಿ ಸಾಬೀತಾಗಲಿದೆ  ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement