ಬನಶಂಕರಿ ದೇವಾಲಯ ಜೀರ್ಣೋದ್ಧಾರ, ಚಂಡಿಕಾ ಹೋಮ
ಜಾವಗಲ್: ಇಲ್ಲಿನ ಇತಿಹಾಸ ಪ್ರಸಿದ್ಧ ಬನಶಂಕರಿ ದೇವಾಲಯ ಜೀರ್ಣೋದ್ಧಾರ ಮತ್ತು ಪ್ರತಿಷ್ಠಾಪನಾ ಕಾರ್ಯಕ್ರಮ ಸಂಭ್ರಮ ಮತ್ತು ಸಡಗರದಿಂದ ನಡೆಯಿತು. ಶುದ್ಧಪುಣ್ಯಾಹ, ಪಂಚಗವ್ಯ, ಗಣಪತಿ ಹೋಮ, ಆಶ್ಲೇಷ ಪೂಜೆ ಮತ್ತು ಆಶ್ಲೇಷ ಬಲಿ ವಾಸ್ತು ಹೋಮ, ನವಗ್ರಹ, ಅನುಜ್ಞಾಹೋಮ, ಕಳಸಪೂಜೆ, ಪವಮಾನ, ಆಶ್ಲೇಷ ಹೋಮ ಪ್ರತಿಷ್ಠಾಪನಾ ಕಾರ್ಯಗಳು ನೆರವೇರಿತು. ಚಂಡಿಕಾ ಹೋಮ, ದುರ್ಗಾ ನಮಸ್ಕಾರ ಹೋಮ, ಅಭಿಷೇಕ ನಡೆದು ಪೂರ್ಣಾಹುತಿ ನೆರವೇರಿತು. ನಂತರ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ಮಾಡಲಾಯಿತು. ವೇದಮೂರ್ತಿ ದಿವಾಕರ ಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು, ಹೋಮಾದಿಗಳು ನಡೆದವು. ದೇವಾಂಗ ಸಂಘದ ಅಧ್ಯಕ್ಷ ಜೆ.ಎಂ.ಶಿವಶಂಕರ್, ಕಾರ್ಯದರ್ಶಿ ಜೆ.ಜಿ.ತಿಮ್ಮಪ್ಪ, ಧರ್ಮರಾಜು. ಮಂಜುನಾಥ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ಮಂಜುನಾಥ್, ಸದಸ್ಯ ಜೆ.ಕೆ.ಶ್ರೀನಿವಾಸ್, ಕುಮಾರ್, ರಮೇಶ್, ಜೆ.ಆರ್.ಗಂಗಾಧರಶೆಟ್ಟಿ, ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜೆ.ಕೆ.ಅಣ್ಣಪ್ಪಶೆಟ್ಟಿ, ಜೆ.ಎಸ್.ತಿಮ್ಮಶೆಟ್ಟಿ ಸಮಾಜ ಬಾಂಧವರು, ಗ್ರಾಮಸ್ಥರು ಇದ್ದರು.