ಬೇಲೂರು ತಂಡಕ್ಕೆ ಆಪೆ ಆಟೋ ಕಪ್
ಬೇಲೂರು: ಬೇಲೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬೇಲೂರಿನ ಆಪೆ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಆಪೆ ಆಟೋ ಕಪ್-2014 ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಪಂದ್ಯಾವಳಿಯಲ್ಲಿ ಬೇಲೂರಿನ ಸಹಾರ ತಂಡವು ಪ್ರಥಮ ಸ್ಥಾನದೊಂದಿಗೆ 11111ರು ಮತ್ತು ಪಾರಿತೋಷಕ ಹಾಗೂ ಬೇಲೂರು ಬಾಯ್ಸ್ ತಂಡವು ದ್ವಿತಿಯ ಸ್ಥಾನ ಪಡೆದು 5555 ರು. ಮತ್ತು ಪಾರಿತೋಷಕವನ್ನು ಪಡೆದುಕೊಂಡವು.
ಜಿಲ್ಲಾ ಮಟ್ಟದ ಟೆನ್ನಿಸ್ಬಾಲ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಹೊಯ್ಸಳ ಆಟೊ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಲೊಕೇಶ್, ಹಿರಿಯ ಕ್ರೀಡಾಪಟು ಹಾಗೂ ಪತ್ರಕರ್ತರಾದ ಬಿ.ಎಲ್. ಲಕ್ಷ್ಮಣ್, ಗಣೇಶ್, ಹೆಬ್ಬಾಳು ಸೋಮಶೇಖರ್, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಕೋನೇರ್ಲು ಲಕ್ಷ್ಮಣ್, ಮಾರಿಗುಡಿ, ಅಶೋಕ್, ಮಧು, ಚಂದ್ರಪ್ಪ, ಸುನೀಲ್, ಲೊಕೇಶ್, ಕುಮಾರ್, ಹಾಗೂ ಪ್ರಥಮ ಸ್ಥಾನ ಪಡೆದ ತಂಡದ ಸದಸ್ಯರು ಇದ್ದರು.