ಸಂಸದರ ಅನುದಾನ ಸಮರ್ಪಕವಾಗಿ ಬಳಕೆ
ಹಾಸನ: ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅಭಿವೃದ್ಧಿ ಕಾಮಗಾರಿಗಳು ಮತ್ತು ಅನುದಾನ ಬಿಡುಗಡೆಯಲ್ಲಿ ಜಿಲ್ಲೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದಲ್ಲಿಯೇ ಸಂಸದರ ನಿಧಿಯ ಅನುದಾನ ಜಿಲ್ಲೆಯಲ್ಲಿ ಉತ್ತಮವಾಗಿ ಬಳಸಿಕೊಳ್ಳಲಾಗುತ್ತಿದೆ.
2008-09ನೇ ಸಾಲಿನಲ್ಲಿ 2 ಕೋಟಿ ರು. ಅನುದಾನ ಬಿಡುಗೆಯಾಗಿದ್ದು, ಅನುದಾನವು ಸಂಪೂರ್ಣವಾಗಿ ಬಳಕೆಯಾಗಿದೆ. 2009-10ನೇ ಸಾಲಿನಲ್ಲಿ 1.99 ಕೋಟಿ ರು.ಗಳ ಅನುನಾದ ಬಿಡುಗಡೆಯಾಗಿದ್ದು, ಈ ಪೈಕಿ 1.89 ಕೋಟಿ ರು.ಗಳ ಅನುದಾನ ಬಳಕೆಯಾಗಿದೆ. 2010-11ನೇ ಸಾಲಿನಲ್ಲಿ 1.95 ಕೋಟಿ ರು. ಬಿಡುಗಡೆಯಾಗಿದ್ದು, ಈ ಪೈಕಿ 1.60 ಕೋಟಿ ರು. ಅನುದಾನ ಬಳಕೆಯಾಗಿದೆ ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
2011-12ನೇ ಸಾಲಿನಲ್ಲಿ 5 ಕೋಟಿ ರು.ಗಳ ಅನುದಾದಲ್ಲಿ 4.90 ಕೋಟಿರು.ಗಳ ಅನುದಾನ ಬಿಡುಗಡೆಯಾಗಿದ್ದು, ಈ ಪೈಕಿ 3.79 ಕೋಟಿ ರು.ಗಳ ಬಳಕೆಯಾಗಿದೆ. 2012-13ನೇ ಸಾಲಿನಲ್ಲಿ 4.90 ಕೋಟಿ ರು.ಗಳ ಅನುದಾನದ ಪೈಕಿ 3.08 ಕೋಟಿ ರು.ಗಳ ಬಳಕೆಯ ಮಾಡಿಕೊಳ್ಳಲಾಗಿದೆ. 2013-14 ನೇ ಸಾಲಿನಲ್ಲಿ 2.5 ಕೋಟಿರು.ಗಳ ಅನುದಾನ ಬಿಡುಗಡೆಯಾಗಿದ್ದು, ಪೂರ್ತಿ ಹಣವನ್ನು ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುತ್ತಿದೆ.
ವಿವಿಧ ಕಾಮಗಾರಿಗಳು: ಹಾಸನ, ಹೊಳೆನರಸೀಪುರ, ಅರಕಲಗೂಡು, ಆಲೂರು, ಸಕಲೇಶಪುರ, ಬೇಲೂರು, ಅರಸೀಕೆರೆ ಮತ್ತು ಚನ್ನನರಾಯಪಟ್ಟಣ ತಾಲೂಕುಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಿದ್ದು, 2008-09ರಲ್ಲಿ 64 ಸಮುದಾಯ ಭವನಗಳ ಕಾಮಗಾರಿಗಳು, 2009-10ರಲ್ಲಿ 98 ಕಾಮಗಾರಿಗಳು, 2010-11ರಲ್ಲಿ 93 ಕಾಮಗಾರಿಗಳು, 2011-12ರಲ್ಲಿ 200 ಕಾಮಗಾರಿಗಳು, 2012-13ರಲ್ಲಿ 190 ಕಾಮಗಾರಿಗಳು, 2013-14ರಲ್ಲಿ 190 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸಂಸದರ ನಿಧಿಯ ಅನುದಾನವು ಉತ್ತಮವಾಗಿ ಜಿಲ್ಲೆಯಲ್ಲಿ ಸದ್ಬಳಕೆಯಾಗುತ್ತಿದೆ. ಇದಕ್ಕೆ ಕಾರಣ ಹಣ ಬರುವ ಮುನ್ನವೇ ಇಲಾಖೆಯ ಅಧಿಕಾರಿಗಳು ಯೋಜನೆಯನ್ನು ಸಿದ್ದ ಪಡಿಸಲಾಗುತ್ತದೆ. ಹಣ ಬಂದ ತಕ್ಷಣವೇ ಕಾಮಗಾರಿಗಳಿಗೆ ಮಾಡಲಾಗುತ್ತಿದೆ. ಆದ್ದರಿಂದ ಸಂಸದ ನಿಧಿಯ ಅನುದಾನ ಜಿಲ್ಲೆಯಲ್ಲಿ ಸದ್ಬಳಕೆಯಾಗಲು ಸಾಧ್ಯವಾಗಿದೆ ಎಂದರು.
ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಸಂಸದರ ನಿಧಿಯ ಅನುದಾನವನ್ನು ಸಮರ್ಪಕವಾಗಿ ಬಳಕೆಯಾಗಿದ್ದು, ಇದು ಜಿಲ್ಲೆಗೆ ಹೆಮ್ಮೆಯನ್ನು ತರಲಾಗಿದೆ. ಸಾಕಷ್ಟು ಸಮುದಾಯ ಭವನಗಳ ಕಾಮಗಾರಿಗಳನ್ನು ಪೂರೈಸಲಾಗಿದೆ. ಇದಕ್ಕೆ ಅಧಿಕಾರಿಗಳು ಸಮರ್ಪಕವಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಸೈಟ್ ವಿತರಣೆ: ಈ ಸಂದರ್ಭದಲ್ಲಿ ಎಸ್.ಎಂ. ಕೃಷ್ಣ ನಗರ ಬಡಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಲೋಕೋಪಯೋಗಿ ಇಲಾಖೆಗೆ ಪರಿಷ್ಕರಣೆಗೆ ಕಳುಹಿಸಿದ್ದು, ಈ ಕಾರ್ಯ ಮುಗಿದೆ. ಜಮೀನನ್ನು ಸಮತಟ್ಟು ಮಾಡಿ, ಸೈಟ್ಗಳಾಗಿ ಪರಿವರ್ತಿಸಿ ನಂತರ ರೈತರಿಗೆ ಸೈಟ್ಗಳನ್ನು ವಿತರಿಸಲಾಗುತ್ತಿದೆ. ಈ ಕಾರ್ಯವನ್ನು ಆದಷ್ಟು ಕೂಡಲೇ ನಿರ್ವಹಿಸಲಾಗುತ್ತದೆ. ಆದಷ್ಟು ಬೇಗ ಸೈಟ್ಗಳನ್ನು ವಿತರಿಸಲಾಗುತ್ತದೆ.
ಜಿಲ್ಲಾ ಕ್ರೀಡಾಂಗಣದಲ್ಲಿ ನಾನಾ ಕೋರ್ಟ್ಗಳ ಅಭಿವೃದ್ಧಿಗೆ ಜಿಲ್ಲಾಡಳಿತ 6.5 ಕೋಟಿ ರು.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಕೆಲವು ಕೋರ್ಟ್ಗಳನ್ನು ಸಿಂತೆಟಿಕ್ ಆಗಿ ಪರಿವರ್ತಿಸುವ ಸಲುವಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಅದೇ ರೀತಿ ಈಗಾಗಲೇ 48 ಲಕ್ಷ ರು.ಗಳ ವಚ್ಚದಲ್ಲಿ ಟೆನಿಸ್ ಕೋರ್ಟ್ನ ನಿರ್ಮಾಣ ಕಾರ್ಯವು ನಡೆಯುತ್ತಿದ್ದು, ಅದನ್ನು ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿ ಅನಾವರಣಗೊಳಿಸಲಾಗುತ್ತದೆ ಎಂದು ಹೇಳಿದರು. ಜೊತೆಗೆ ಚನ್ನರಾಯಪಟ್ಟಣ ತಾಲೂಕಿನ ಬೆಲಸಿಂದ ಪಾರ್ಕ್ನ ಅಭಿವೃದ್ಧಿಗೂ ಸಹ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು, ಅಲ್ಲಿಂದ ಹಣ ಬಂದ ತಕ್ಷಣ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.