ಬೇಲೂರು ಪುರಸಭೆ ಮುಖ್ಯ ಇಂಜಿನಿಯರ್ ವಿರುದ್ಧ ತನಿಖೆಗೆ ಆಗ್ರಹ
ಬೇಲೂರು: ಪುರಸಭೆ ಮುಖ್ಯ ಎಂಜಿನಿಯರ್ ಶಿವಪ್ರಸಾದ್ ಅವರು ಭಾರಿ ಪ್ರಮಾಣದ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಸಮಗ್ರ ತನಿಖೆಗೆ ಒತ್ತಾಯ ಮಾಡಬೇಕು ಎಂದು ಪುರಸಭಾ ಸದಸ್ಯ ಶಾಂತಕುಮಾರ್ ಒತ್ತಾಯ ಪಡಿಸಿದರು.
ಇತ್ತೀಚೆಗೆ ನಡೆದ ಪುರಸಭೆ 2014-15 ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹೊಳೆಬೀದಿ ಮತ್ತು ಗುರಪ್ಪಗೌಡ ಬೀದಿಯಲ್ಲಿ ಕೆಲ ಕಾಮಾಗಾರಿಗಳು ನಡೆಯದೆ ಗುತ್ತಿಗೆದಾರರಿಗೆ ಹಣ ಪಾವತಿಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ದಾಖಲೆಗಳು ಲಭ್ಯವಿದ್ದು, ಆಡಳಿತ ಅಧಿಕಾರಿಗಳು ತಕ್ಷಣವೇ ತನಿಖೆಗೆ ಗುರಿಪಡಿಸಬೇಕು ಎಂದರು.
ಮನವಿ: ತಾಲ್ಲೂಕು ಸರ್ಕಾರಿ ನಿವೃತ್ತ ಸಂಘದ ಅಧ್ಯಕ್ಷ ರಾಜೇಗೌಡ ಮಾತನಾಡಿ, ಬೇಲೂರು ಪಟ್ಟಣದ ವಿಶ್ವಮಟ್ಟದಲ್ಲಿ ಹೆಸರು ಪಡೆದಿದೆ. ಆದರೆ, ಇಲ್ಲಿ ಹಿರಿಯ ನಾಗರಿಕರಿಗೆ ಯಾವ ಮೂಲ ಸೌಲಭ್ಯವನ್ನು ಪುರಸಭೆ ನೀಡಿಲ್ಲ, ಕನಿಷ್ಟ ಉದ್ಯಾನವನ ನಿರ್ಮಾಣ ಮಾಡಿ ಹಿರಿಯರಿಗೆ ಅನುಕೂಲ ಮಾಡಬೇಕು. ಪಟ್ಟಣದ ಕೆಲ ಭಾಗದಲ್ಲಿ ಉದ್ಯಾನವನಗಳನ್ನು ಗುರುತು ಮಾಡಿದ್ದರೂ ಭೂಮಿ ಒತ್ತುವರಿಯಾಗಿವೆ. ಆದ್ದರಿಂದ, ಪುರಸಭೆ ಮುಂದಿನ ತನ್ನ ಬಜೆಟ್ನಲ್ಲಿ ಹೆಚ್ಚು ಅನುಧಾನ ನೀಡುವ ಮೂಲಕ ಉದ್ಯಾನವನಗಳ ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಬಸವರಾಜು, ಪುರಸಭೆ ಸದಸ್ಯರು ಇದ್ದರು.