ಸುದ್ದಿ ಸಂಕ್ಷೇಪ
ಬೂದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ
ಹಾಸನ: ಶ್ರೀಬೂದೇಶ್ವರ ಸ್ವಾಮಿ ಪುಣ್ಯ ಕ್ಷೇತ್ರದ ಶ್ರೀ ಬೂದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಫೆ. 27ರಿಂದ ಮಾ. 1ರವರೆಗೆ ತಾಲೂಕಿನ ಬಿಡಾರಹಳ್ಳಿಯಲ್ಲಿ ನಡೆಯಲಿದೆ. ಫೆ. 27ರಂದು ಮಹಾ ರುದ್ರಾಭಿಷೇಕ, ಧರ್ಮಧ್ವಜ ಸ್ಥಾಪನೆ, ಗಂಗಾಪೂಜೆ, ಗಣಪತಿ ಹೋಮ, ನವಗ್ರಹ ಹೋಮ, ರುದ್ರ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ, ಪೂಜಾ ವಿಧಿ ನಡೆಯಲಿದೆ. ಫೆ. 28ರಂದ ನಾನಾ ಪೂಜಾ ಕಾರ್ಯ ಹಾಗೂ ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿದೆ. ಮಾ. 1ರಂದು ಶ್ರೀಬೂದೇಶ್ವರ ಸ್ವಾಮಿಗೆ ಮಹಾಮಂಗಳಾರತಿ ಮತ್ತು ವಿಶೇಷ ಪೂಜೆ ನಂತರ ರಥೋತ್ಸವ ಶ್ರೀಯರಿಗೆ ಗಂಗಾ ಪೂಜೆ ನಡೆಯಲಿದೆ.
ನಿರ್ದೇಶಕರ ಆಯ್ಕೆ
ಹಾಸನ: ಹಾಸನ ನಗರದ ವಿದ್ಯಾನಗರ ಗೃಹ ನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾಗಿ ಎಚ್.ಎನ್.ಮಂಜೇಗೌಡ, ಬಿ.ಎಂ. ರಾಮಾಚಾರ್, ಕೆ. ಮಂಚಶೆಟ್ಟಿ, ಗೋವಿಂದೇಗೌಡ, ಜಿ.ಆರ್. ಜಗದೀಶ್, ಎಚ್.ಆರ್. ಕೃಷ್ಣಮೂರ್ತಿ, ಪುಟ್ಟರಾಜೇಗೌಡ, ಸಿ.ಎಂ. ಮೋಹನ್, ಎಂ. ಶ್ರೀನಿವಾಸ್, ಕೆ. ಶಾರದಮ್ಮ ಮತ್ತು ರತ್ನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಷ ಸೇವಿಸಿ ಆತ್ಮಹತ್ಯೆ
ಜಾವಗಲ್: ಹೋಬಳಿ ತಿಮ್ಲಾಪುರ ಗ್ರಾಮದ ಯೋಗೀಶ್ ಅಲಿಯಾಸ್ ಅಣ್ಣಯ್ಯ (22) ಎಂಬುವರು ಕೌಟುಂಬಿಕ ಕಾರಣಗಳಿಂದ ಬೇಸತ್ತು ಇತ್ತೀಚೆಗೆ ವಿಷ ಕುಡಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಸನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿದರು ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. 1 ವರ್ಷದ ಹಿಂದೆ ಕಡೂರು ತಾಲೂಕು ಶ್ರೀರಾಂಪುರದ ಗೋವಿಂದಪ್ಪನವರ ಮಗಳು ಅನಿತಳಾನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದು, ಮದುವೆ ನಂತರ ಕೌಟುಂಬಿಕ ಕಲಹದಿಂದ ಪತ್ನಿ ಅನಿತಾ ತವರು ಮನೆಗೆ ಹೋಗಿದ್ದರು. 20 ದಿವಸಗಳ ಹಿಂದೆ ಕರೆದುಕೊಂಡು ಬರಲು ಹೋದಾಗ ಗಲಾಟೆಯಾಗಿ ಕಡೂರು ಪೊಲೀಸ್ ಠಾಣೆಯಲ್ಲಿ ಯೋಗೀಶ್ ತಂದೆ ರಾಜಪ್ಪ ಹಾಗೂ ಸಹೋದರರ ಮೇಲೆ ಪ್ರಕರಣ ದಾಖಲಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಅಯ್ಕೆ ಪಟ್ಟಿ ಪ್ರಕಟ
ಹಾಸನ: ಶಿಕ್ಷಣ ಹಕ್ಕು ಕಾಯಿದೆ ಅಡಿ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಫೆ.20ರಿಂದ ಶಾಲೆಗಳಲ್ಲಿ ಲಾಟರಿ ಮೂಲಕ ಅಯ್ಕೆ ಪ್ರಕ್ರಿಯೆ ಮುಗಿಸಲಾಗಿದೆ ಹಾಗೂ ತಾತ್ಕಾಲಿಕ ಅಯ್ಕೆ ಪಟ್ಟಿಯನ್ನು ಶಾಲೆಗಳಲ್ಲಿ ಪ್ರಕಟಿಸಲಾಗಿದೆ. ಈ ಅಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ಏನಾದರೂ ಅಕ್ಷೇಪಣೆಗಳಿದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ಅಕ್ಷೇಪಣೆಗಳನ್ನು ಫೆ. 25 ರೊಳಗೆ ಸಂಬಂಧಿಸಿದ ಶಾಲಾ ಮುಖ್ಯಸರಿಗೆ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸಬಹುದು. ಯಾವುದೇ ಅಕ್ಷೇಪಣೆ ಬಾರದಿದ್ದಲ್ಲಿ ಅಂತಿಮ ಅಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು. ನಂತರ ಬಂದ ದೂರು ಅಕ್ಷೇಪಣೆಗಳನ್ನು ಸ್ವೀಕರಿಸಿಲಾಗುವುದಿಲ್ಲ ಎಂದು ಹಾಸನ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.
ಆಲೋಚಿಸುವಾಗ ಎಚ್ಚರಿಕೆಯಿರಲಿ: ವೀರೇಶಾನಂದ ಶ್ರೀ
ದಿಡಗ (ಚನ್ನರಾಯಪಟ್ಟಣ ತಾ.): ಮನೋಧರ್ಮ, ಭವಿಷ್ಯವನ್ನು ನಿರ್ಧರಿಸುವುದರಿಂದ ಆಲೋಚಿಸುವ ವಿಷಯದಲ್ಲಿ ಎಚ್ಚರಿಕೆಯಿಂದಿರಬೇಕು ಎಂದು ರಾಮಕೃಷ್ಣ - ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಉದಯಪುರ ಮತ್ತು ಹಿರೀಸಾವೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಇತ್ತೀಚೆಗೆ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪುತ್ಥಳಿ ಅನಾವರಣ: ಇದೇ ಸಂದರ್ಭದಲ್ಲಿ ಗಾಂಧಿ ಪುತ್ಥಳಿ ಅನಾವರಣಗೂಳಿಸಲಾಯಿತು. ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಹೋ. ಶ್ರೀನಿವಾಸಯ್ಯ ಗಾಂಧಿ ಮೌಲ್ಯಗಳ ಬಗ್ಗೆ ತಿಳಿಸಿಕೊಟ್ಟರು. ಶಾಸಕ ಸಿ. ಎನ್. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕಬ್ಬಳಿ ರಂಗೇಗೌಡ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಬ್ಬಮ್ಮ, ಉದಯಪುರ ಮತ್ತು ಹಿರೀಸಾವೆ ಕಾಲೇಜಿನ ಪ್ರಾಂಶುಪಾಲ ಪ್ರೊ. ನಂಜುಂಡಸ್ವಾಮಿ, ಡಾ. ಶ್ಯಾಮಲಾದೇವಿ, ಚಂದುಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪುಷ್ಪ ರವಿಕುಮಾರ್ ಇದ್ದರು. ಉದಯಪುರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ. ಸಿ.ಎಲ್. ಶಿವಕುಮಾರ್ ಸ್ವಾಗತಿಸಿದರು. ಗಾಂಧಿಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಪ್ರೊ.ಜಿ.ವಿ. ಶಿವರಾಜು ಮಾತನಾಡಿದರು. ಹಿರೀಸಾವೆ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ. ನಂಜುಂಡ ವಂದಿಸಿದರು. ವೀಣಾ ಪ್ರಾರ್ಥಿಸಿದರು. ದಿವ್ಯ ನಿರೂಪಿಸಿದರು.