ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಟ್ರ್ಯಾಕ್ಟರ್ ಕಂಬಕ್ಕೆ ಡಿಕ್ಕಿ: ಇಬ್ಬರಿಗೆ ಗಾಯ

Mainashree
Updated On : 23 Feb 2014, 9:32 am

ರಾಮನಾಥಪುರ: ಕೊಣನೂರಿನ ಮುಖ್ಯ ರಸ್ತೆಯಲ್ಲಿ ಇರುವ ಅಂಚೆ ಕಚೇರಿ ಮುಂಭಾಗದ ವಿದ್ಯುತ್ ಕಂಬಕ್ಕೆ ಹುಲ್ಲು ತುಂಬಿಕೊಂಡು ಬರುತ್ತಿದ್ದ ಬೊಮ್ಮನಹಳ್ಳಿಯ ಸೋಮಣ್ಣ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್ ಇತ್ತೀಚೆಗೆ  ಡಿಕ್ಕಿ ಹೊಡೆದಿದೆ. ಪರಿಣಾಮ ಕಂಬ ನೆಲಕ್ಕುರುಳಿ ಈಶ್ವರ ಮೇಲೆ ಬಿದ್ದು, ಕಡವಿನಹೊಸಹಳ್ಳಿಯ ಮಂಜ ಅವರಿಗೆ ಬೆನ್ನು ಮೂಳೆಗಳೆಲ್ಲಾ ಮುರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.  
ಮತ್ತೊಬ್ಬ ಕೊಣನೂರಿನ ನಿವಾಸಿ ಸೊಸೈಟಿ ಮಂಜು ಎಂಬುವರಿಗೆ ತಲೆ ಬುರುಡೆ ಮತ್ತು ಬುಜ ಕೈ ಪೆಟ್ಟಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ಯುವಂತೆ ಸ್ಥಳೀಯ ಸರ್ಕಾರಿ ವೈದ್ಯರು ಸೂಚಿಸಿದರು. ಈ ಘಟನೆಯಿಂದ ಟ್ರ್ಯಾಕ್ಟರ್ ಮತ್ತು ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.  ಕಂಬ ಬಿದ್ದಿರುವ ಸ್ಥಳದಲ್ಲಿ ಪ್ರತಿನಿತ್ಯ ಪಾನಿಪೂರಿ, ಗೋಬಿ ಅಂಗಡಿಗಳು ನಡೆಯುತ್ತಿದ್ದು, ಮತ್ತು ಪಕ್ಕದಲ್ಲೇ ಇರುವ ವೈಶಾಲಿ ವೈನ್ ಸ್ಟೋರ್‌ನಲ್ಲಿ ಜನ ಯಾವಾಗಲೂ ಗಿಜಿಗಿಜಿ ಎನ್ನುತ್ತಿದ್ದು, ಆದರೆ ಇಂದು ಅದೃಷ್ಟವಶಾತ್ ಈ ದಿನ ಅಂಗಡಿಗಳು ತೆರೆಯದೇ ಇದ್ದ ಕಾರಣ ಹೆಚ್ಚಿನ ಪ್ರಾಣಾಪಾಯ ತಪ್ಪಿದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement