ಸುದ್ದಿ ಸಂಕ್ಷೇಪ
ಹಗರೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ
ಹಾಸನ: ಹಗರೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ 4ನೇ ತ್ರೈಮಾಸಿಕ ನಿರ್ವಹಣಾ ಕೆಲಸಗಳನ್ನು ಮಾಡಬೇಕಾಗಿರುವುದರಿಂದ ಫೆ. 25 ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಹಗರೆ, ಹುಲುಗುಂಡಿ, ಮಲ್ಲಾಪುರ, ದೇವಿಹಳ್ಳಿ, ಮಾದಿಹಳ್ಳಿ, ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಬೇಲೂರಿನ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
ಮಹದೇವ್ ಅವಿರೋಧ ಆಯ್ಕೆ
ರಾಮನಾಥಪುರ: ರಾಮನಾಥಪುರ ಹೋಬಳಿ ಬಸವಾಪಟ್ಟಣದ ವಿವೇಕಾನಂದ-ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಶನಿವಾರ ನಡೆದ ಚುನಾವಣೆಯಲ್ಲಿ ಬಿ.ಪಿ. ಮಹದೇವ್ ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಬಿ.ಪಿ. ಮಹದೇವ್ ಅವರಿಗೆ ಬಿ.ಕೆ. ಪ್ರಕಾಶ್, ಸುಬ್ರಹ್ಮಣ್ಯ, ರಾಜೇಗೌಡ, ಮುರುಳಿಧರ್, ವೆಂಕಟಾಚಲ ಅಭಿನಂದಿಸಿದರು.