ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರಸೀಕೆರೆ: ತಾಲೂಕಿನ 169 ಕೇಂದ್ರದಲ್ಲಿ ಪೋಲಿಯೊ ಲಸಿಕೆ

Rashmi Kasaragodu
Updated On : 25 Feb 2014, 2:11 am

ಅರಸೀಕೆರೆ: ಪಟ್ಟಣದ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆ, ರೇಲ್ವೆ ನಿಲ್ದಾಣ, ಬಸ್ ನಿಲ್ದಾಣ, ಅಂಗನವಾಡಿ ಕೇಂದ್ರಗಳು ಸೇರಿದಂತೆ ತಾಲೂಕಿನ 169 ಕೇಂದ್ರಗಳಲ್ಲಿ ಮಕ್ಕಳಿಗೆ 2ನೇ ಹಂತದ ಪಲ್ ಪೋಲಿಯೊ ಲಸಿಕೆ ನೀಡಲಾಯಿತು.
ಪಟ್ಟಣದ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆ ಆವರಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಪೋಲಿಯೊ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿದ ತಹಸಿಲ್ದಾರ್ ಕೇಶವಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ದಿನೇಶ್ ಮಾತನಾಡಿ, ಪೋಲಿಯೊ ಮುಕ್ತ ಆರೋಗ್ಯವಂತ ರಾಷ್ಟ್ರ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆದ್ದರಿಂದ ಐದು ವರ್ಷದೊಳಗಿನ ಮಗುವಿಗೆ ಹಾಕಿಸುವ ಎರಡು ಹನಿ ಮಕ್ಕಳನ್ನ ಶಾಶ್ವತ ಅಂಗವಿಕಲತೆಯಿಂದ ದೂರವಿರುವಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಚಕ್ರಪಾಣಿ, ಡಾ. ಷಡಾಕ್ಷರಿ, ಮಕ್ಕಳ ವೈದ್ಯೆ ಶಾಂತಲ, ಪುರಸಭಾಧ್ಯಕ್ಷ ಮೋಹನ್ ಕುಮಾರ್, ರೋಟರಿ ಸಂಸ್ಥೆಯ ಅಧ್ಯಕ್ಷ ಪ್ರವೀಣ್ಕುಮಾರ್, ಮಾಜಿ ಅಧ್ಯಕ್ಷ ಯೋಗೀಶಾಚಾರ್, ರೆಡ್ಕ್ರಾಸ್ ಅಧ್ಯಕ್ಷ ಫಿಸಿಯೋ ಮಧು, ಮೋಹನ್ ಕುಮಾರ್, ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎಂ.ವೈ. ಖಾನ್, ಇನ್ನರ್ ವೀಲ್ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement