ತಕ್ಷಣದಿಂದಲೇ ಹೊಸ ಮರಳು ನೀತಿ ಜಾರಿ
ಕನ್ನಡಪ್ರಭ ವಾರ್ತೆ ಆಲೂರು ಫೆ 24
ಅಕ್ರಮ ಹಾಗೂ ಅವೈಜ್ಞಾನಿಕವಾಗಿ ನಡೆಯುತ್ತಿರುವ ಮರಳುಗಾರಿಕೆ ತಡೆಯುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಹೊಸ ಮರಳು ನೀತಿಯನ್ನು ಪ್ರಸ್ತುತದಿಂದಲೇ ಜಾರಿಗೆ ತರುತ್ತಿದ್ದು, ಪ್ರಕೃತಿ ಪರಿಸರಕ್ಕೆ ಹಾಗುತ್ತಿರುವ ಹಾನಿಯನ್ನು ತಡೆದು ವೈಜ್ಞಾನಿಕವಾಗಿ ಮರಳನ್ನು ಎತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ. ಮಧುಕೇಶ್ವರ ತಿಳಿಸಿದರು.
ಪಟ್ಟಣದ ತಾ.ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, 2012ರಲ್ಲಿ ಟೆಂಡರ್ ಮೂಲಕ ನೀಡುವ ಪ್ರಕ್ರಿಯೆ ನಡೆದಿ ದ್ದು, ಹೊಸ ನೀತಿಯ ಪ್ರಕಾರ ಹರಾಜು ಮೂಲಕ ನೀಡಲಾಗುತ್ತದೆ. ಹೊಸ ನೀತಿಯ ಪ್ರಕಾರ ನದಿ ದಡದಲ್ಲಿ ಯಂತ್ರಗಳ ಬಳಕೆ ಮಾಡುವಂತಿಲ್ಲ. ನದಿಯಿಂದ ಬ್ಲಾಕ್ವರೆಗೆ ಯಂತ್ರಗಳನ್ನು ಬಳಸದೆ ಶೇಖರಣೆ ಮಾಡಬೇಕು. ಹೊಸ ಮರಳು ನೀತಿಯ ಪ್ರಕಾರ ತಾಲೂಕು ಮಟ್ಟದ ಪಿಡಿಒ, ಗ್ರಾಮಲೆಕ್ಕಿಗ, ಆರ್ಐ, ಆರ್ಎಫ್ ಅವರಿಗೆ ಅಧಿಕಾರವಿರುತ್ತದೆ. ತಾಲೂಕು ಮರಳು ಉಸ್ತುವಾರಿ ಸಮಿತಿ ನಿರ್ಣಯ ತೆಗೆದುಕೊಂಡು ವಿತರಣೆ ಮಾಡುತ್ತದೆ. ಲೋಕೋಪಯೋಗಿ ಇಲಾಖೆಯಿಂದ ತುಂಡು ಗುತ್ತಿಗೆ ನೀಡಬಹುದು ಎಂದರು.
ಮೀಸಲು: ಹೊಸ ಮರಳು ನೀತಿಯು ವೈಜ್ಞಾನಿಕ ಹಾಗೂ ಪರಿಸರಕ್ಕೆ ಧಕ್ಕೆಯಾಗದಂತೆ ತೆಗೆಯಬೇಕು ಎಂದು ಹೇಳುತ್ತದೆ. ಸರ್ಕಾರದ ಆದೇಶದ ಪ್ರಕಾರ ಎಸ್ಸಿ, ಎಸ್ಟಿಗಳಿಗೆ ಮೂರು ಬ್ಲಾಕ್ಗಳನ್ನು ಮೀಸಲಿಡಲಾಗಿದೆ.
ಅಕ್ರಮಕ್ಕೆ ಶಿಕ್ಷೆ: ಅಕ್ರಮ ಮರಳುಗಾರಿಗೆಯ ನಿಯಂತ್ರಣಕ್ಕಾಗಿ ಸದ್ಯಕ್ಕೆ ಸಿಮೀತವಾಗಿ ತುಂಡುಗುತ್ತಿಗೆ ನೀಡಲಾಗುತ್ತಿದ್ದು, ಮೈನಿಂಗ್ ಪ್ಲಾನ್ನಿಂದ ನಂತರ ವಿಸ್ತರಿಸಲಾಗುತ್ತದೆ ಎಂದ ಅವರು, ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಕ್ರಮ ಮರಳು ಸಾಗಾಣಿಕೆ ಲಾರಿಗೆ 25 ಸಾವಿರವರೆಗೂ ಹಾಗೂ ಟ್ರ್ಯಾಕ್ಟರ್ಗೆ 5 ಸಾವಿರವರೆಗೂ ದಂಡ ವಿಧಿಲಾಗುತ್ತಿದೆ. ದಂಡ ಕಟ್ಟಿದ ವಾಹನಗಳು ತಾವು ಹೊತ್ತು ತಂದ ಮರಳನ್ನು ಇಲಾಖೆಯ ಸ್ಟಾಕ್ ಯಾರ್ಡ್ಗೆ ಒಪ್ಪಿಸಬೇಕು. ಮರಳು ಪ್ರಕರಣ ಚಾರ್ಜ್ಶೀಟ್ ಸಲ್ಲಿಸಿದ ಅಧಿಕಾರಿಗಳೇ ಪ್ರಮುಖ ಸಾಕ್ಷಿಗಳಾಗಿದ್ದು, ಅಪರಾಧ ಸಾಬೀತಾದಲ್ಲಿ 2 ವರ್ಷ ಜೈಲು ಶಿಕ್ಷೆಯಾಗುತ್ತದೆ.
ಮೀಸಲಾತಿ ಹೀಗೆ: ಹೊಸ ಮರಳು ನೀತಿಯ ಪ್ರಕಾರ, ಎಸ್ಸಿ - ಎಸ್ಟಿ ನಿಯಮ 31 ಬಿ ಅನುಸಾರ ಮೀಸಲಾತಿ ನೀಡಲಾಗಿದೆ. 8 ಮರಳು ನಿಕ್ಷೇಪ ಕೇಂದ್ರಗಳನ್ನು ಗುರುತ್ತಿಸಿದ್ದು, ಹರಿಹಳ್ಳಿಯಲ್ಲಿ ಮೂರು ಬ್ಲಾಕ್ ಈ ಪೈಕಿ 1ನೇ ಬ್ಲಾಕ್ ಎಸ್ಸಿ, 2ನೇ ಬ್ಲಾಕ್ಸಾಮಾನ್ಯ, ಮೂರನೆ ಬ್ಲಾಕ್ ಎಸ್ಸಿ, ಕೊಡಗಲವಾಡಿಯಲ್ಲಿ 1 ಬ್ಲಾಕ್ ಇದ್ದು, ಅದು ಎಸ್ಟಿ, ಕಿತಗಳಲೆ ಗ್ರಾಮದಲ್ಲಿ 2 ಬ್ಲಾಕ್ಗ್ಳಿದ್ದು, ಈ ಪೈಕಿ 1 ಮತ್ತು ನೇ ಬ್ಲಾಕ್ಗ್ಳು ಸಾಮಾನ್ಯವಾಗಿದೆ. ಯಾರಗಳಲೆ ಗ್ರಾಮದಲ್ಲಿ ಸಾಮಾನ್ಯ ಬ್ಲಾಕ್, ಬಿಗತ್ತೂರು ಗ್ರಾಮದಲ್ಲಿ 1 ಬ್ಲಾಕ್ ಇದ್ದು, ಅದು ಸಾಮಾನ್ಯಾವಾಗಿದೆ. ಕಿತಗಳಲೆಯಲ್ಲಿ 1 ಬ್ಲಾಕ್ ಇದ್ದು, ಅದು ಸಾಮಾನ್ಯ ಮೀಸಲಾತಿಯಾಗಿದೆ. ಈ ಭಾಗದಲ್ಲಿ ತೆಗೆದ ಮರಳನ್ನು ಕೆಂಚಮ್ಮನಹೊಸಕೋಟೆ ದೇವಸ್ಥಾನದ ಮುಂಭಾಗ ಶೇಖರಣ ಘಟಕ ತೆರೆಯಲಾಗಿದೆ ಎಂದು ವಿವರಿಸಿದರು.
ಸೂಚನೆ: ಆಲೂರು-ಸಕಲೇಶಪುರ ತಾಲೂಕು ನಲ್ಲಿ ಹೇಮಾವತಿ, ಯಗಚಿ ಹಾಗೂ ವಾಟೇಹೊಳೆಯಲ್ಲಿ ಶೇ.75ರಷ್ಟು ಮರಳುಗಾರಿಕೆ ಇದ್ದು, ಸಣ್ಣ ಸಣ್ಣ ಭಾಗದಲ್ಲಿ ಮರಳುಗಾರಿಕೆ ನಡೆಸಲು ಅವಕಾಶ ನೀಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿ, ನಾಲೆ ಸೇತುವೆಯ ಬಳಿ ಸರ್ಕಾರಿ ನಿಮಯದ ಪ್ರಕಾರ 1 ಕಿಮೀ ವರೆಗೂ ಮರಳುಗಾರಿಕೆ ನಡೆಸಬಾರದು ಎಂದರು.
ನೇರ ಖರೀದಿಗೆ ಅವಕಾಶ: ಸಾರ್ವಜನಿಕರು ನೇರವಾಗಿಯೂ ಸಹ ಮರಳನ್ನು ನಿಕ್ಷೇಪ ಕೇಂದ್ರಗಳಿಂದ ಪಡೆಯಬಹುದಾಗಿದ್ದು, 1 ಕ್ಯೂಬಿಕ್ ಮಾತ್ರ ನೀಡಲಾಗುವುದು. ಇದರ ಸದುಪಯೋಗವನ್ನು ಜನರು ಪಡೆಯಬಹುದು ಎಂದರು.
ತಹಸೀಲ್ದಾರ್ ಶಾರದಾಂಬಾ ಬಗ್ಗೆ ಶ್ಲಾಘನೆ
ಅಕ್ರಮ ಮರಳು ಸಾಗಾಣಿಕೆಯನ್ನು ತಡೆಯುವಲ್ಲಿ ಶ್ರಮಿಸುತ್ತಿರುವ ತಹಸೀಲ್ದಾರ್ ಶಾರದಾಂಬ ಅವರನ್ನು ಎಸಿ ಮಧುಕೇಶ್ವರ್ ಶ್ಲಾಘಿಸಿದರು. ಧೈರ್ಯದಿಂದ ಉತ್ತಮ ರೀತಿ ಕೆಲಸ ಮಾಡಿ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಗೆಯಿಂದ ಆಗುತ್ತಿದ್ದ ಆದಾಯ ಸೋರಿಕೆಯನ್ನು ತಡೆದು 35 ಲಕ್ಷಕ್ಕೂ ಹೆಚ್ಚು ದಂಡವನ್ನು ಶಾರದಾಂಬಾ ಅವರು ವಸೂಲಿ ಮಾಡಿದ್ದಾರೆ ಎಂದು ಅಭಿನಂದಿಸಿದರು.
ಹೊಸ ದರ ಜಾರಿ
ಹೊಸ ಮರಳು ನೀತಿಯ ಪ್ರಕಾರ 1 ಲಾರಿ ಲೋಡ್ಗೆ 6 ಕ್ಯೂಬಿಕ್ ಮೀಟರ್ಗಳಿಗೆ 4200 ರು.ನಿಗದಿಯಾಗಿದ್ದರೂ, 1 ಕ್ಯೂಬಿಕ್ ಮೀಟರ್ಗೆ 700 ರು. ದರ ನಿಗದಿಯಾಗಿದೆ.