ದೇಗುಲದ ಹುಂಡಿ ಒಡೆದು ಕಳವು
ಬೇಲೂರು: ಪಟ್ಟಣ ಸಮೀಪದ ನಿಡಗೋಡು ಗ್ರಾಮದಲ್ಲಿನ ಶ್ರೀನಾಗಚೌಡಮ್ಮ ದೇವಸ್ಥಾನ ಕಬ್ಬಿಣದ ಮುಂಬಾಗಿಲನ್ನು ಮೀಟಿ ಎರೆಡು ಹುಂಡಿಯನ್ನು ದೋಚಿರುವ ಘಟನೆ ಇತ್ತೀಚೆಗೆ ನಡೆದಿದೆ.
ಪ್ರತಿನಿತ್ಯದಂತೆ ಅರ್ಚಕರು ಶ್ರೀನಾಗಚೌಡಮ್ಮ ದೇವಸ್ಥಾನದ ಪೂಜೆಗೆಂದು ಬೆಳಗ್ಗೆ 9.30ಕ್ಕೆ ಬಂದ ಸಂದರ್ಭದಲ್ಲಿ ದೇವಸ್ಥಾನದ ಮುಂಬಾಗಿಲನ್ನು ಹಾರೆಯಿಂದ ಮೀಟಿರುವ ಕಳ್ಳರು ದೇವಸ್ಥಾನದಲ್ಲಿದ್ದ ಎರಡು ಹುಂಡಿಯನ್ನು ಹೊಡೆದು ಅದರಲ್ಲಿದ್ದ ನಗ ನಾಣ್ಯ ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬೇಲೂರು ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.