ದೇವರು, ಧರ್ಮಕ್ಕಿಂತ ದೇಶ ದೊಡ್ಡದು: ಎಲ್. ನರಸಿಂಹಯ್ಯ
ದಿಡಗ (ಚನ್ನರಾಯಪಟ್ಟಣ ತಾ.): ದೇವರು ಧರ್ಮಗಿಂತ ದೇಶವೆ ದೂಡ್ಡದು ಎಂದು ಗಾಂಧಿಭವನದ ಟ್ರಸ್ಟಿಗ ಎಲ್. ನರಸಿಂಹಯ್ಯ ತಿಳಿಸಿದರು.
ದಿಡಗ ಗ್ರಾಮದಲ್ಲಿ ಗಾಂಧೀ ಸ್ಮಾರಕ ನಿಧಿ ಹಾಗೂ ಉದಯಪುರ ಮತ್ತು ಹಿರಿಸಾವೆ ಪ್ರಥಮ ದರ್ಜೆ ಕಾಲೇಜಿನ ವಿಶೇಷ ವಾರ್ಷಿಕ ಶಿಬಿರದಲ್ಲಿ ಇತ್ತೀಚೆಗೆ ಗಾಂಧಿ ಮತ್ತು ಮೌಲ್ಯ ಶಿಕ್ಷಣ ಕುರಿತು ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಅಭ್ಯುದಯ ನಮ್ಮ ಅಭ್ಯುದಯ ದೇಶದ ಅವನತಿ ಭಾರತ ಪುರಾತನ ಕತೆಗಳ ಅಜ್ಜಿಯಲ್ನ ಸಂಪ್ರದಾಯದ ಮುತ್ತಾಜ್ಜಿ. ಕೆಲವರು ಸತ್ತು ಬದುಕುತ್ತಾರೆ. ಆದರೆ ಮತ್ತೆ ಕೆಲವರು ಬದುಕಿದ್ದರೂ ಸತ್ತಂತೆ. 1904- 1905ರ ಕಾಲದಲ್ಲಿ ಪಾಶ್ಚಿಮಾತ್ಯ ದೇಶದ ಪಾಕಶಾಲೆಯಿದ್ದ ಒಬ್ಬ ವ್ಯಕ್ತಿ ಸರಳ ಜೀವನ ನೆಡೆಸಿ, ಜನರ ನಡುವೆ ಸಾಮರಸ್ಯ ಬೆಳಸಿ ಕರ್ಮವೀರ ಎಂದು ಅಲ್ಲಿನ ಜನರಿಂದ ಕರೆಸಿ ಕೊಂಡವರು ಸಂತ ಗಾಂಧೀಜಿ ಎಂದರು.
ಗಾಂಧಿಭವನದ ಗೌರವ ಕಾರ್ಯದರ್ಶಿ ಪ್ರೊ. ಶಿವರಾಜು, ಪ್ರಾಂಶುಪಾಲೆ ಡಾ. ಶ್ಯಾಮಲಾದೇವಿ ಶಾಂತಮ್ಮ, ಪೂರ್ಣಿಮ, ನಂದಿನಿ ಇದ್ದರು.