ಮಟ್ಕಾ ಜೂಜು: ಮೂವರ ಸೆರೆ
ಹಾಸನ: ನಗರದ ಪ್ರತ್ಯೇಕ ಪ್ರಕರಣದಲ್ಲಿ ಮಟ್ಕಾ ಜೂಜಾಡುತ್ತಿದ್ದ ಮೂವರನ್ನು ಬಂಧಿಸಿರುವ ಘಟನೆ ನಡೆದಿದೆ.
ನಗರದ ಚನ್ನಪಟ್ಟಣ ಅರಳೆಕಟ್ಟೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಬೈಕಿನ ಮೇಲೆ ಕುಳಿತುಕೊಂಡು ಸಾರ್ವಜನಿಕರನ್ನು ವಂಚಿಸುವ ಉದ್ದೇಶದಿಂದ 11ಗೆ 80ಕೊಡುವುದಾಗಿ ಮಟ್ಕಾ ಜೂಜಾಡುಸುತ್ತಿದ್ದ ಮಂಜುನಾಥ್ (37)ನ್ನು ಬಂಧಿಸಿದ್ದು, ಜೂಜಾಟದಿಂದ ಗಳಿಸಿದ್ದ 280 ನಗದು ಮತ್ತು ಬೈಕನ್ನು ವಶಪಡಿಸಿಕೊಂಡು ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಹಾಸನದ ಕಸ್ತೂರಿ ಬಾ ರಸ್ತೆ, ಕಟ್ಟಿನಕೆರೆ ಮಾರ್ಕೆಟ್ ಹತ್ತಿರ ಸಾರ್ವಜನಿಕರನ್ನು ವಂಚಿಸುವ ಉದ್ದೇಶದಿಂದ 1ಗೆ 80 ಕೊಡುವುದಾಗಿ ಮಟ್ಕಾ-ಜೂಜಾಟಾಡುತ್ತಿದ್ದ ಮಸ್ತಾಫ್ (19) ಮತ್ತು ಅಬ್ದುಲ್ ರಜಾಕ್(32)ನ್ನು ಬಂಧಿಸಿದ್ದು, ಜಾಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 3,000ವನ್ನು ವಶಪಡಿಸಿಕೊಂಡು ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.