ಲಭ್ಯವಿರುವ ಸೀಟುಗಳು, ಪ್ರವೇಶ ಪ್ರಕ್ರಿಯೆ ವೇಳಾಪಟ್ಟಿ ಪ್ರಕಟ
ಕನ್ನಡಪ್ರಭ ವಾರ್ತೆ, ಹಾಸನ, ಫೆ.24
ಖಾಸಗಿ ಪೂರ್ವ ಪ್ರಾಥಮಿಕ ಶಾಲೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶವನ್ನು ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಾಲೆಯಲ್ಲಿ ಲಭ್ಯವಿರುವ ಸೀಟುಗಳು ಮತ್ತು ಪ್ರವೇಶ ಪ್ರಕ್ರಿಯೆ ವೇಳಾಪಟ್ಟಿಯನ್ನು ಶಾಲಾ ಪ್ರಕಟಣಾ ಫಲಕದಲ್ಲಿ ಶಾಲಾ ಮುಖ್ಯಸ್ಥರು ಕೆಳಕಾಣಿಸಿದಂತೆ ಪ್ರಕಟಿಸತಕ್ಕದ್ದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಆರ್. ಬಸವರಾಜ ತಿಳಿಸಿದ್ದಾರೆ.
ಮಾ.1 ರಂದು ಲಭ್ಯ ಸೀಟುಗಳು ಮತ್ತು ಪ್ರವೇಶ ವೇಳಾಪಟ್ಟಿಯನ್ನು ಪ್ರಕಟಿಸಬೇಕು. ಮಾ.20 ರಿಂದ ಮಾ. 31 ರವರೆಗೆ ಅರ್ಜಿ ಸ್ವೀಕರಿಸಬೇಕು. ಮಾ.31 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ.
ಏ.4 ರಂದು ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿ ಮತ್ತು ಕಾರಣ ಸಹಿತ ತಿರಸ್ಕೃತ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಬೇಕು. ಏ.7 ರಂದು ಸಾರ್ವಜನಿಕರು ಮೇಲಿನ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕಡೆಯ ದಿನವಾಗಿದೆ. ಏ.8 ರಂದು ಪ್ರಥಮ ಆಯ್ಕೆ ಪಟ್ಟಿ ಪ್ರಕಟಿಸಬೇಕು. ಏ.15 ರಂದು ಪ್ರಥಮ ಆಯ್ಕೆ ಪಟ್ಟಿಯಲ್ಲಿರುವವರು ಪ್ರವೇಶ ಹೊಂದಲು ಕಡೆ ದಿನವಾಗಿದೆ. ಏ.16 ರಂದು ದ್ವಿತೀಯ ಆಯ್ಕೆ ಪಟ್ಟಿ ಪ್ರಕಟಿಸಬೇಕು. ದ್ವಿತೀಯ ಆಯ್ಕೆ ಪಟ್ಟಿಯಲ್ಲಿರುವವರು ಪ್ರವೇಶ ಹೊಂದಲು ಅಂದೇ ಕಡೇ ದಿನ ಎಂದು ತಿಳಿಸಿದ್ದಾರೆ. ಅನುದಾನ ರಹಿತ ಶಾಲೆಯವರು ತಮ್ಮ ಶಾಲೆಯಲ್ಲಿ ನಿಯಮನುಸಾರ ನಿಗಧಿ ಪಡಿಸಿದ ಬೋಧನಾ ಶುಲ್ಕದ ಮೊತ್ತವನ್ನು ಸಾರ್ವಜನಿಕರ ಮಾಹಿತಿಗಾಗಿ ದೊಡ್ಡ ಅಕ್ಷರಗಳಲ್ಲಿ ಪ್ರಕಟಿಸುವುದು. ಅಲ್ಲದೆ ಸದರಿ ಮಾಹಿತಿಯನ್ನು ಶಾಲೆಯ ಮಾಹಿತಿ ಪುಸ್ತಕದಲ್ಲಿ ಮುದ್ರಿಸುವುದು ಹಾಗೂ ಶಾಲಾ ಸೂಚನಾ ಫಲಕದಲ್ಲಿ ಪ್ರಕಟಿಸುವುದರ ಜೊತೆಗೆ ಇಲಾಖೆಯ ವೆಬ್ಸೈಟ್ ಢಿಢಿಢಿ.ಝ್ಛ್ಟ್ಟಟಜಜ್ಡ್ಛಛಡ್ಝ್ಟಿಟಿ.್ಞಛ್ಠ.ಟ್ಝ್ಛಿ.್ಝಟಿ ನಲ್ಲಿ ಪ್ರಕಟಿಸುವುದು.
ಶಾಲಾ ಪ್ರವೇಶಕ್ಕಾಗಿ ವಿದ್ಯಾರ್ಥಿಯನ್ನಾಗಲಿ ಅಥವಾ ಪೋಷಕರನ್ನಾಗಲಿ ಪರೀಕ್ಷಿಸುವುದು ಅಥವಾ ಸಂದರ್ಶನ ನಡೆಸುವುದನ್ನು ಶಿಕ್ಷಣ ಹಕ್ಕು ಕಾಯಿದೆ 2009ರ ಸೆಕ್ಷನ್ 13(2) ಬಿ ಪ್ರಕಾರ ನಿಷಿದ್ಧ. ಇದನ್ನು ಹೊರತು ಪಡಿಸಿ ಪ್ರಾರಂಭಿಕ ತರಗತಿಗೆ ಪ್ರವೇಶ ನೀಡುವ ಸಲುವಾಗಿ ಪ್ರವೇಶ ನಡೆಸಿದಲ್ಲಿ ಮೊದಲ ಸಾರಿಯ ಉಲ್ಲಂಘನೆಗೆ 25,000 ರು. ದಂಡ ವಿಧಿಸಲಾಗುವುದು. ನಂತರದ ಪ್ರತಿ ಉಲ್ಲಂಘನೆಗೆ 50,000 ದಂಡ ವಿಧಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.