ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವೀರಶೈವ ಸಮಾಜ ಕಟ್ಟಲು ಜನಾಂಗದವರು ಒಟ್ಟಾಗಿ: ಮಲ್ಲಿಕಾರ್ಜುನ ಶ್ರೀ

Rashmi Kasaragodu
Updated On : 25 Feb 2014, 2:13 am

ಹಾಸನ: ಸಮಾಜವನ್ನು ಕಟ್ಟಿ ಬೆಳೆಸಲು ವೀರಶೈವ ಜನಾಂಗದವರು ಎಲ್ಲರೂ ಒಟ್ಟಾಗಿ ಸಹಕರಿಸುವಂತೆ ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾದ ಗೌರವಾಧ್ಯಕ್ಷ ಹಾಗೂ ಅರಕಲಗೂಡು ದೊಡ್ಡ ಮಠದ ಮಠಾಧೀಶ ಶ್ರೀ ಮಲ್ಲಿಕಾರ್ಜುನ ಶ್ರೀ ಕರೆ ನೀಡಿದ್ದಾರೆ. ನಗರದ ಸಂಗಮೇಶ್ವರ ಬಡಾವಣೆಯಲ್ಲಿರುವ ಜವೇನಹಳ್ಳಿ ಮಠದ ಆವರಣದಲ್ಲಿ ಭಾನುವಾರ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸಮರ್ಪಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವೀರಶೈವ ಸಮಾಜದವರು ಮುಖ್ಯವಾಗಿ ಸಮಾಜದ ಬಗ್ಗೆ ಕಾಳಜಿ ಹೊಂದಿ ಸೌಲತ್ತು ಒದಗಿಸುವ ಗುರಿ ಹೊಂದಿರಬೇಕು. ನಮ್ಮ ಸಮಾಜದಲ್ಲಿ ನೊಂದವರಿಗೆ ಹಾಗೂ ಬಡವರಿಗೆ ಈ ಸಂಘವು ಗುರುತಿಸಿ ಉತ್ತಮ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು. ಸಮಾಜವು ನಮ್ಮೊಂದಿಗೆ ಇದ್ದು ಸಹಕರಿಸುತ್ತಿದೆ. ನಮ್ಮ ಸೇವೆಯನ್ನು ಸಮಾಜಕ್ಕೆ ನೀಡುವ ಮನೋಭಾವವನ್ನು ಪ್ರತಿ ವೀರಶೈವರು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಹಾಗೂ ಪಿಯು ಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕಗಳಿಸಿ ಅತಿ ಹೆಚ್ಚಿನ ಅಂಕ ಪಡೆದು 2012-13ನೇ ಸಾಲಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಭ ಪುರಸ್ಕಾರ ನೀಡುವ ಮೂಲಕ ಇದರ ಉಪಯೋಗ ಮಕ್ಕಳು ಪಡೆದುಕೊಂಡಿದ್ದಾರೆ. ಇಂತಹ ಕಾರ್ಯಕ್ರಮಗಳಿಗೆ ನಮ್ಮ ಜನಾಂಗದವರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದಿಲ್ಲ. ಸರ್ಕಾರದಿಂದ ಸಿಗುವಂತಹ ಮೂಲ ಸೌಕರ್ಯ ಪಡೆಯುವಲ್ಲಿ ನಾವು ಹಿಂದೆ ಇದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement