ಅಧಿಕಾರಿಗಳ ಕಿರುಕುಳ: ಆತ್ಮಹತ್ಯೆಗೆ ಯತ್ನಿಸಿದ ನೌಕರ
ಸಕಲೇಶಪುರ: ಕಿರು ಜಲವಿದ್ಯುತ್ ಕಂಪನಿಯ ಹಿರಿಯ ಅಧಿಕಾರಿಗಳ ಕಿರುಕುಳತಾಳಲಾರದೆ ನೌಕರನೊಬ್ಬ ವಿಷಕುಡಿದು ಅತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ತಾಲೂಕಿನ ಮಾರನಹಳ್ಳಿ ಗ್ರಾಮ ಸಮೀಪದ ಕೆಂಪುಹೊಳೆಯ ಐಪಿಸಿಎಲ್ ಕಂಪನಿಯಲ್ಲಿ ಬಳಿ ಮಂಗಳವಾರ ನಡೆದಿದೆ.
ಹಾಸನ ಜಿಲ್ಲೆಯ ಗೊರೂರು ಗ್ರಾಮದ ಸಿ.ಸಿ. ಸೋಮಶೇಖರ್(28) ಆತ್ಮಹತ್ಯೆಗೆ ಯತ್ನಿಸಿದ ನೌಕರನಾಗಿದ್ದಾನೆ.
6 ವರ್ಷಗಳಿಂದ ಕಂಪನಿಯಲ್ಲಿ ನೌಕರನಾಗಿರುವ ಈ ವ್ಯಕ್ತಿಗೆ 6 ಸಾವಿರ ಸಂಬಳ ನೀಡುತ್ತಿದ್ದು, ಇತ್ತೀಚೆಗೆ ನೌಕರರ ಸಂಘವನ್ನು ಹುಟ್ಟುಹಾಕಿದ್ದಾರೆಂಬ ಕಾರಣಕ್ಕಾಗಿ ಈತನನ್ನು ಬೆಂಗಳೂರಿಗೆ ವರ್ಗಾವಣೆಗೊಳಿಸಿದ್ದರು. ಕಂಪನಿ ನೀಡುವ ಅಲ್ಪಸಂಬಳದಲ್ಲಿ ಬೆಂಗಳೂರಿನಲ್ಲಿ ಜೀವನ ನಡೆಸುವುದು ಕಷ್ಟಕರ ಅಲ್ಲದೆ ತನ್ನ ತಂದೆಗೆ ಅನಾರೋಗ್ಯ ಕಾಡುತ್ತಿರುವುದರಿಂದ ಇಲ್ಲೆ ಕೆಲಸದಲ್ಲೆ ಮುಂದುವರಿಸುವಂತೆ ಹಿರಿಯ ಅಧಿಕಾರಿಗಳಲ್ಲಿ ವಿನಂತಿ ಮಾಡಿಕೊಂಡಿದ್ದನ್ನು ಆದರೆ ಮಂಗಳವಾರ ಕೆಲಸಕ್ಕೆ ಬಂದ ಈ ನೌಕರನನ್ನು ಸಂಸ್ಥೆಯ ಮೇಲಾಧಿಕಾರಿ ಅಶೋಕ ಎಂಬುವರು ಕಂಪನಿಯ ಗೇಟ್ನಿಂದ ಹೊರತಳ್ಳಿದ್ದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.