ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಪಘಾತದಲ್ಲಿ ಶಿಕ್ಷಕಿ ಸಾವು

Rashmi Kasaragodu
Updated On : 26 Feb 2014, 1:05 am

ಸಕಲೇಶಪುರ: ಆಪೆ ಆಟೋ ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿ ಶಿಕ್ಷಕಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಹೊಸೂರು ಗ್ರಾಮ ಸಮೀಪ ಮಂಗಳವಾರ ನಡೆದಿದೆ. ತಾಲೂಕಿನ ರಾಮೇನಹಳ್ಳಿ ದಾಕ್ಷಾಯಿಣಿ (33) ಮೃತಪಟ್ಟ ಶಿಕ್ಷಕಿ. ಇವರು ಶಾಲೆ ಮುಗಿಸಿ ಬಾಳ್ಳುಪೇಟೆ ಗ್ರಾಮಕ್ಕೆ ವಾಪಸ್ ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಆಪೆ ಆಟೋ ಡಿಕ್ಕಿ ಹೊಡೆದಿದೆ. ಇದರಿಂದ   ತೀವ್ರ ಗಾಯಗೊಂಡ  ದಾಕ್ಷಾಯಿಣಿ  ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ  ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವಾಸವಿ ಪುಷ್ಪಯಾಗ ಕಾರ್ಯಕ್ರಮ
ಚನ್ನರಾಯಪಟ್ಟಣ: ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಅಮ್ಮನವರಿಗೆ ವಿಶೇಷವಾಗಿ ವಾಸವಿ ಪುಷ್ಪಯಾಗ ಕಾರ್ಯಕ್ರಮ ನಡೆಯಿತು. ವಾಸವಿ ಮಹಿಳಾ ಸಮಾಜದಿಂದ ಕನ್ನಿಕಾ ಪರಮೇಶ್ವರಿ ಅಮನವರಿಗೆ ವಿಶೇಷ ಪೂಜೆ, ಅಲಂಕಾರ ನಡೆಯಿತು. ಸಂಘದ ಅಧ್ಯಕ್ಷೆ ಸ್ವರ್ಣರಮಾನಂದ, ಕಾರ್ಯದರ್ಶಿ ಮಂಜುಳರಂಗನಾಥ್, ಸಾವಿತ್ರಿ ನಾಗೇಂದ್ರಶೆಟ್ಟಿ, ರತ್ನ ಶ್ರೀನಿವಾಸ್, ತಾರಾರಮೇಶ್, ವಿಜಯ ಮುಂತಾದವರಿದ್ದರು. ವಾಸವಿ ಸಂಘದ ಅಧ್ಯಕ್ಷ ಸಿ.ಆರ್. ಸುಬ್ಬರಾಯಶೆಟ್ಟರು, ಆದಿಶೇಷಕುಮಾರ್ ಇದ್ದರು. ವೇದ ಬ್ರಹಶ್ರೀ ಅನಂತರಾಮು, ಸುದರ್ಶನ್ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement