ಅಬ್ಕಾರಿ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ
ಹಾಸನ: ವ್ಯಕ್ತಿಯೋರ್ವನ ಮೇಲೆ ಮದ್ಯ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಮದ್ಯದಂಗಡಿ ಲೈಸೆನ್ಸ್ರದ್ದುಗೊಳಿಸುವಂತೆ ಆಗ್ರಹಿಸಿ ನಗರದ ಅಬಕಾರಿ ಡಿಸಿ ಕಚೇರಿಯ ಮುಂದೆ ಮಂಗಳವಾರ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ತಾಲೂಕಿನ ಯಡಿಯೂರು ಗ್ರಾಮದ ವಾಸಿ ಕೃಷ್ಣೇಗೌಡ(44) ಕೊಲೆಯಾದ ವ್ಯಕ್ತಿ. ಮೃತನ ಕುಟುಂಬದವರು ಮದ್ಯದಂಗಡಿಯ ಮಾಲೀಕರನ್ನು ಬಂಧಿಸಿದ್ದು, ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಹಾಗೂ ಲೈಸೆನ್ಸ್ನ್ನು ರದ್ದುಗೊಳಿಸಬೇಕೆಂದು ರಾತ್ರಿ ಪಟ್ಟು ಹಿಡಿದರು.
ಎರಡು ದಿನಗಳ ಹಿಂದಷ್ಟೇ ಕೃಷ್ಣೇಗೌಡ ನಗರದ ವಿದ್ಯಾನಗರದ ವೈನ್ನಲ್ಲಿ ಮದ್ಯವನ್ನು ಸೇವಿಸಿದ್ದ ಸಂದರ್ಭದಲ್ಲಿ ಮದ್ಯದಂಗಡಿಯ ಮಾಲೀಕರಾದ ಮಣಿಕಂಠ ಹಾಗೂ ನವೀನ್ ಜೊತೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ. ಆಗ ಮದ್ಯದ ಅಂಗಡಿಯ ಮಾಲೀಕರಿಬ್ಬರು ಕೃಷ್ಣೇಗೌಡರ ಮೇಲೆ ರಾತ್ರಿ ಮದ್ಯವನ್ನು ಸುರಿದು ಬೆಂಕಿ ಹಚ್ಚಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಕೃಷ್ಣೇಗೌಡನನ್ನು ಜಿಲ್ಲಾಸ್ಪತ್ರೆಗೆ ದಾಖಲಾಸಲಾಗಿದೆ ಎನ್ನಲಾಗಿದೆ.
ವೈದ್ಯರ ಹೇಳಿದ ಮೇರೆ ಕೃಷ್ಣೇಗೌಡನನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಸಾವನ್ನಪ್ಪಿದ್ದಾರೆ. ಇದರಿಂದ ಕುಪಿತಗೊಂಡ ಮೃತ ಕೃಷ್ಣೇಗೌಡರ ಕುಟುಂಬದವರು ರಾತ್ರಿ ಶವವನ್ನು ತೆಗೆದುಕೊಂಡು ಬಂದು ನಗರದ ಅಬಕಾರಿ ಇಲಾಖೆಯ ಡಿಸಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕೃಷ್ಣೇಗೌಡನನ್ನು ಕೊಲೆ ಮಾಡಲಾಗಿದೆ. ಆದ್ದರಿಂದ ಕೃಷ್ಣೇಗೌಡ ಸಾವಿಗೆ ಕಾರಣರಾಗಿರುವ ವಿದ್ಯಾ ವೈನ್ ಮಾಲೀಕರನ್ನು ಬಂಧಿಸಲಾಗಿದ್ದರೂ ಮದ್ಯದ ಅಂಗಡಿ ಮಾತ್ರ ತೆರೆಯಲಾಗಿದೆ. ತನಿಖೆ ಆಗುವವರೆಗೂ ವ್ಯಾಪಾರ ಮಾಡಲು ಅವಕಾಶ ನೀಡಬಾರದು. ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಡಿವೈಎಸ್ಪಿ ಭೇಟಿ: ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ಪರಮೇಶ್ವರ್ ಬೀಮಕ್ಕರವರು ಹಾಗೂ ಸಬ್ಇನ್ಸ್ಸ್ಪೆಕ್ಟರ್ ಸಮಧಾನ ಮಾಡಲು ಮುಂದಾದ ಅವರು, ಈಗಾಗಲೇ ವಿದ್ಯಾವೈನ್ ಮಾಲೀಕರಾದ ಸಹೋದರ ಇಬ್ಬರನ್ನು ಕಾನೂನು ಪ್ರಕಾರ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಕಾನೂನು ಪ್ರಕಾರ ಶಿಕ್ಷೆ ಆಗುವುದಾಗಿ ಮನವರಿಕೆ ಮಾಡಿದರು.